ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಟಿ.ಯು.ತನಿಷ್ಕ್ ಸಾಧನೆ

20 vpt 3
.ಕೊಯಮತ್ತೂರಿನಲ್ಲಿ ನಡೆದ ಕರಾಟೆ ಡೊ ಚಾಂಪಿಯನ್ಶಿಪ್ ನಲ್ಲಿಪದಕ ಪಡೆದ ತನಿಷ್ಕ್.
Published on

ವಿರಾಜಪೇಟೆ: ಬಾಲ್ಯದಲ್ಲೇ ಕ್ರೀಡಾ ಸ್ಫೂರ್ತಿ ಬೆಳೆಸಿಕೊಂಡಲ್ಲಿ ಮುಂದೆ ಪ್ರತಿಭಾನ್ವಿತ ಕ್ರೀಡಾಪಟು ಆಗಬಹುದು ಎಂಬುದಕ್ಕೆ ಇಲ್ಲಿನ ಐದನೇ ತರಗತಿ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ.

ತಮಿಳುನಾಡಿನ ಕೊಯಮತ್ತೂರಲ್ಲಿ ಇತ್ತೀಚೆಗೆ ನಡೆದ 17ನೇ ಐಎಂಜಿಕೆ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಟಿ.ಯು. ತನಿಷ್ಕ್ ಟೀಮ್ ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದೆ. ವೈಯಕ್ತಿಕ ಕಥಾ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಮತ್ತು ಕುಮಿತೆ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಭಾಜನನಾಗಿದ್ದಾನೆ.

ಈತ ವಿರಾಜಪೇಟೆಯ ಕಲ್ಲುಬಾಣೆ ನಿವಾಸಿ ಟಿ.ಬಿ.ಉಮೇಶ್ ಮತ್ತು ಎನ್.ಜಿ.ಶ್ರುತಿ ದಂಪತಿ ಪುತ್ರ. ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕರಾಟೆ ಶಿಕ್ಷಕ ಸೆನ್ಸಾಯಿ ಎಂ.ಬಿ.ಚಂದ್ರನ್ ಅವರ ಬಳಿ ಈತ ತರಬೇತಿ ಪಡೆಯುತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net