ವಿವಿಧ ಕಂಪನಿ ತುಪ್ಪ ಮಾದರಿ ಸಂಗ್ರಹ

ttd ghee issue koppal food inspector ride shops sample
Published on

ಕೊಪ್ಪಳ: ತಿರುಪತಿ ತಿರುಮಲದಲ್ಲಿ ಲಡ್ಡಿಗೆ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ಮಾರಾವಾಗುವ ವಿವಿಧ ಕಂಪನಿಗಳ ತುಪ್ಪ ಮಾದರಿ ಸಂಗ್ರಹಿಸಿದ ಅಧಿಕಾರಿಗಳು ಪರೀಕ್ಷಗೆ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟದಿಂದ ಪೂರೈಕೆ ಆಗುವ ನಂದಿನಿ ತುಪ್ಪ ಹೊರತುಪಡಿಸಿ ಇತರ ಕಂಪನಿಗಳ ತುಪ್ಪದ ಮಾದರಿ ಸಂಗ್ರಹಿಸಲಾಯಿತು. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಜಿಲ್ಲಾ ಅಂಕಿತ ಅಧಿಕಾರಿ ಡಾ.ಅಲಕನಂದಾ ಮಳಗಿ ನೇತೃತ್ವದಲ್ಲಿ ತಾಲೂಕು ಅಧಿಕಾರಿಗಳು ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿದರು. ಶ್ರೀ ಕೃಷ್ಣ, ಸ್ವಸ್ತಿಕ್​, ಜಿಆರ್​ಬಿ, ಹ್ಯಾಟ್ಸನ್​, ಶುಭಂ, ಶ್ರೀಮೂಲ ಸೇರಿ ವಿವಿಧ ತುಪ್ಪಗಳ ಮಾದರಿ ಪಡೆದುಕೊಂಡರು. ಜಿಲ್ಲೆಯಲ್ಲಿ ತುಪ್ಪ ಮಾರಾಟವಿದ್ದು, ಉತ್ಪಾದನಾ ಟಕಗಳಿಲ್ಲ. ವಿವಿಧೆಡೆ ಮಾರಾಟವಾಗುವ ತುಪ್ಪವನ್ನು ಪಡೆದ ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳಿಸಿಕೊಟ್ಟರು. ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳಾದ ಕೃಷ್ಣ ರಾಠೋಡ್​, ಕಲ್ಮೇಶ, ನಾಗರಾಜ, ಮಲ್ಲಿಕಾರ್ಜುನ ಸ್ವಾಮಿ ತಂಡ ಮಾದರಿ ಸಂಗ್ರಹಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net