ಟಿಟಿ ಪಲ್ಟಿಯಾಗಿ 11ಜನಕ್ಕೆ ಗಾಯ

Published on

ಶಿರಸಿ: ನಿಯಂತ್ರಣ ತಪ್ಪಿದ ಟೆಂಪೊ ಟ್ರಾವೆಲ್ಲರ್ (ಟಿಟಿ) ವಾಹನ ಪಲ್ಟಿಯಾದ ಪರಿಣಾಮ ಚಾಲಕ ಸೇರಿ 11 ಜನ ಗಾಯಗೊಂಡ ಘಟನೆ ತಾಲೂಕಿನ ಕುಮಟಾ-ಶಿರಸಿ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಸೋಮವಾರ ನಡೆದಿದೆ.

ಹೊನ್ನಾವರ ತಾಲೂಕಿನ ಗುಂಡಬಾಳದ ಗೀತಾ ಗಜಾನನ ಶೆಟ್ಟಿ (56), ಮುಕ್ತಾ ಆನಂದ ಶೆಟ್ಟಿ (52), ಜಂಬೇಬೆಟ್ಟದ ಸುವರ್ಣ ಶ್ರೀಧರ ಶೆಟ್ಟಿ (46) ಗುಂಡಬಾಳದ ಸಚಿನ ಗಜಾನನ ಶೆಟ್ಟಿ (31), ಗಜಾನನ ಗಣಪಯ್ಯ ಶೆಟ್ಟಿ (63), ನಾಗರತ್ನ ವಿಠ್ಠಲ್ ಶೆಟ್ಟಿ (44), ಮಾಧುರ್ಯ ಶ್ರೀಧರ ಶೆಟ್ಟಿ (26), ಜಿ.ವಿ. ನವೀನಕುಮಾರ ವಿಠ್ಠಲ ಗಣಪಯ್ಯ ಶೆಟ್ಟಿ (23) ಸಂಜನಾ ಗಜಾನನ ಶೆಟ್ಟಿ (23), ಐಶ್ವರ್ಯಾ ಶ್ರೀಧರ ಶೆಟ್ಟಿ (22) ಶ್ರೀಧರ ಗಣಪಯ್ಯ ಶೆಟ್ಟಿ ( 56), ಟಿಟಿ ವಾಹನದ ಚಾಲಕ ಹೊನ್ನಾವರದ ಬಾಬು ಅಂಬಿಗಾ (30) ಗಾಯಗೊಂಡಿದ್ದಾರೆ.

ವಾಹನದ ವೇಗ ನಿಯಂತ್ರಿಸಲಾಗದೆ, ರಸ್ತೆಯ ಪಕ್ಕದಲ್ಲಿದ್ದ ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net