ಟಿಎಸ್​ಸಿಎ, ಎಲ್​ಸಿಎ ತಂಡಗಳಿಗೆ ಜಯ

shri durga 3
Published on

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾ ಕಪ್-16 ವಯೋಮಿತಿಯ ಕ್ರಿಕೆಟ್ ಟೂರ್ನಾಮೆಂಟ್​ನಲ್ಲಿ ಮಂಗಳವಾರ ಪ್ರೀತಮ್ ಹುಲಿಕೊಪ್ಪ ಹಾಗೂ ಸಾಯಿನಾಥ ರಾಜೋಳಿ ಭರ್ಜರಿ ಬ್ಯಾಟಿಂಗ್​ನಿಂದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್​ಸಿಎ), ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ವಿರುದ್ದ 17ರನ್​ಗಳಿಂದ ಜಯ ಗಳಿಸಿತು.

ಪ್ರೀತಮ್ ಹುಲಿಕೊಪ್ಪ (48ರನ್, 39ಎಸೆತ, 6ಬೌಂ., 1ಸಿ.) ಸಾಯಿನಾಥ ರಾಜೋಳಿ (38ರನ್, 36ಎಸೆತ, 4ಬೌಂ.) ಹಾಗೂ ವೈಭವ ಕರಿಸಂಕನವರ (29ರನ್) ನೆರವಿನಿಂದ ಟಿಎಸ್​ಸಿಎ 149ರನ್ ಮೊತ್ತಕ್ಕೆ ಆಲೌಟ್ ಆಯಿತು. ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಸೋಹಮ್ ಪಾಟೀಲ 3 ಹಾಗೂ ಸುರೇಂದ್ರ ಪಾಟೀಲ 2ವಿಕೆಟ್​ಗಳನ್ನು ಪಡೆದರು.

ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ 23.5 ಓವರ್​ಗಳಲ್ಲಿ 132ರನ್ ಮೊತ್ತಕ್ಕೆ ಆಲೌಟ್ ಆಯಿತು. ಅಶುತೋಷ್ ಹಿರೇಮಠ 48, ಸುಚೀತ್ 23ರನ್ ಬಾರಿಸಿದರು.

ಅಥರ್ವ ಮಾನೆ ಅರ್ಧ ಶತಕ

ದಿನದ 2ನೇ ಪಂದ್ಯದಲ್ಲಿ ಅಥರ್ವ್ ಮಾನೆ (68ರನ್, 44ಎಸೆತ) ಹಾಗೂ ಸಮರ್ಥ ಕಾಂಬಳೆ (62ರನ್, 29ಎಸೆತ) ಅರ್ಧಶತಕಗಳ ನೆರವಿನಿಂದ ಲಕ್ಷ ಕ್ರಿಕೆಟ್ ಅಕಾಡೆಮಿ, ದುರ್ಗಾ ವುಮೆನ್ಸ್ ಕಂಬೈನ್ಡ್ ತಂಡದ ವಿರುದ್ಧ 129 ರನ್​ಗಳಿಂದ ಗೆಲುವು ಸಾಧಿಸಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಲಕ್ಷ ಕ್ರಿಕೆಟ್ ಅಕಾಡೆಮಿ 25 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿತು. ದಿವ್ಯಾ ರಾವಲ್ 2 ಹಾಗೂ ಶರ್ವಿುನ್ ಜೆ. 1ವಿಕೆಟ್ ಪಡೆದರು. ದುರ್ಗಾ ವುಮೆನ್ಸ್ ಕಂಬೈನ್ಡ್ ತಂಡ 25 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 87ರನ್ ಗಳಿಸಿತು. ಲಕ್ಷ ಕ್ರಿಕೆಟ್ ಅಕಾಡೆಮಿಯ ಅನಿವೇಶ ಎನ್. ಹಾಗೂ ಜಕವಾನ್ ತಲಾ 3 ವಿಕೆಟ್ ಕಬಳಿಸಿದರು.

ಅ.18ರಂದು ಬೆಳಗ್ಗೆ 8.30ಕ್ಕೆ ಯೂನಿಯನ್ ಜಿಮ್ಾನಾ ಬೆಳಗಾವಿ- ಲಕ್ಷ ಕ್ರಿಕೆಟ್ ಅಕಾಡೆಮಿ ಚಿಕ್ಕೋಡಿ ಹಾಗೂ ಮಧ್ಯಾಹ್ನ 1 ಗಂಟೆಗೆ ಶ್ರೀ ದುರ್ಗಾ ಕ್ರಿಕೆಟ್ ಅಕಾಡೆಮಿ-ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ಸೆಣಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net