ಕಾಲರಾವೆಂದು ಘೋಷಿಸಿ ಮುಚ್ಚಿಹಾಕಲು ಯತ್ನ

Marasandra muniyappa BSP
Published on

ಚಿತ್ರದುರ್ಗ: ಕವಾಡಿಗರ ಹಟ್ಟಿ ದಲಿತ ಕಾಲನಿಯ ಪ್ರಕರಣವನ್ನು ಕಾಲರಾವೆಂದು ಘೋಷಿಸಿ ಮುಚ್ಚಿಹಾಕಲು ಸ್ಥಳೀಯ ಶಾಸಕರು, ಅಧಿಕಾರಿಗಳು ಕುತಂತ್ರ ರೂಪಿಸಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ದೂರಿದ್ದಾರೆ.

ಆಗಿರುವ ಲೋಪ ಮುಚ್ಚಿಕೊಳ್ಳಲು ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವರದಿಯಲ್ಲಿ ಕಾಲರಾ ರೋಗಾಣು ಕಂಡುಬಂದಿವೆ ಎಂಬುದಾಗಿ ತಪ್ಪು ಮಾಹಿತಿ ಬರೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಕರಣ ಮುಚ್ಚಿಹಾಕುವ ಬದಲು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net