ಮಾಧ್ಯಮಕ್ಕೆ ಕೆಟ್ಟ ಹೆಸರು ತರಲು ಯತ್ನ

Published on

ಹೊಳೆನರಸೀಪುರ: ವಿಶ್ವದಲ್ಲೇ ಭಾರತೀಯ ಮಾಧ್ಯಮ ಕ್ಷೇತ್ರ ಅತ್ಯಂತ ಬಲಾಢ್ಯವಾದುದು. ಅದನ್ನು ಕೆಡಿಸಲು ಹಲವು ಮಂದಿ ಪ್ರಯತ್ನಿಸುತ್ತಿದ್ದು ಇದರಿಂದ ಮಾಧ್ಯಮ ಕ್ಷೇತ್ರ ಅಪವಿತ್ರವಾಗುತ್ತಿದೆ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.


ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಸೋಷಿಯಲ್ ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದಲ್ಲಿನ ಅಂಕು- ಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ತನ್ನ ಕೆಲಸವನ್ನು ಬಿಟ್ಟು ಬೇರೊಬ್ಬರನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದು ವಿಷಾದಿಸಿದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ಪತ್ರಕರ್ತರಾದ ಮದನ್‌ಗೌಡ, ಲೀಲಾವತಿ, ತಾಲೂಕು ಘಟಕದ ಅಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್, ಕೆ.ಆರ್.ಮಂಜುನಾಥ್, ಉದಯಕುಮಾರ್, ರವಿನಾಕಲಗೂಡು, ಎಸ್.ಆರ್.ಪ್ರಸನ್ನ, ಶೇಷಾದ್ರಿ, ಕೆ.ಪಿ.ಎಸ್.ಪ್ರಮೋದ್, ಎಂ.ಆರ್.ಸತ್ಯನಾರಾಯಣ್, ರಾಜೇಶ್, ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ, ಜೆ.ಆರ್.ಕೆಂಚೇಗೌಡ ಹಾಜರಿದ್ದರು. ಉದ್ಯಮಿ ಎನ್.ಆರ್.ಅನಂತಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಕಾರಣ ವರದಿಗಾರ ಆರ್.ರಂಗಸ್ವಾಮಿ ಅವರಿಗೆ 25 ಸಾವಿರ ರೂ.ನೆರವು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net