

ಮುಳಗುಂದ: ಗುರಿ ಸಾಧನೆಗೆ ವಿದ್ಯಾರ್ಥಿ ದೆಸೆಯಿಂದಲೆ ಪ್ರಯತ್ನ ಇರಬೇಕು. ವರಕವಿ ದ.ರಾ.ಬೇಂದ್ರೆ ಅವರು ವಿದ್ಯಾರ್ಥಿ ಇದ್ದಾಗಲೆ ತಾವು ಸಾಧಿಸಬೇಕಿರುವ ಗುರಿ ರೂಢಿಸಿಕೊಂಡಿದ್ದರುಎಂದು ಧಾರವಾಡದ ಸಾಹಿತಿ ಡಾ.ಶ್ಯಾಸುಂದರ ಜಿ.ಬಿದರಕುಂದಿ ಹೇಳಿದರು.
ಸ್ಥಳೀಯ ಬಿಎಂಎಸ್ ಕಲಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್.ಜೆ.ಜೆ.ಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಲನದಲ್ಲಿ ಅವರು ಮಾತನಾಡಿದರು. ನಮ್ಮೊಳಗಿರುವ ಏಕಾಗ್ರತೆ, ಧೈರ್ಯ, ಪ್ರೋತ್ಸಾಹ ಬಳಸಿಕೊಂಡು ಪ್ರತಿಭೆಯನ್ನು ಅರಳಿಸಬೇಕು. ಎಂದರು.
ವರ್ತಕ ಶಿವಾನಂದ ದಳವೆ ಮಾತನಾಡಿದರು. 2023-24ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. 2000-2001ನೇ ಸಾಲಿನ ವಿದ್ಯಾರ್ಥಿಗಳಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯಾರ್ಥವಾಗಿ 60 ಸಾವಿರ ರೂ. ಠೇವಣಿ ದೇಣಿಗೆ ನೀಡಲಾಯಿತು. ದಿ. ಫಕೀರಪ್ಪ ಬಾತಾಖಾನಿ ಸ್ಮರಣಾರ್ಥ ಸಾವಿತ್ರಿ ಬಾತಾಖಾನಿ ಅವರು 25 ಸಾವಿರ ರೂ. ದೇಣಿಗೆ ನೀಡಿದರು.
ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಕಲಾವಿದ ಅನಂತ ದೇಶಪಾಂಡೆ, ಶಿಕ್ಷಣ ಸಮಿತಿ ಉಪಾಧ್ಯಕ್ಷ ವಿಜಯ ನೀಲಗುಂದ, ಡಾ.ಎಸ್.ಸಿ. ಚವಡಿ, ಸಿದ್ದು ಕುರ್ತಕೋಟಿ, ಫಕೀರಯ್ಯ ಅಮೋಘಿಮಠ, ಪಿ.ಎ. ವಂಟಕರ, ಬಿ.ಸಿ. ಬಡ್ನಿ, ಪ್ರಾಚಾರ್ಯ ಎ.ಎಂ. ಅಂಗಡಿ, ಶಿಕ್ಷಕರಾದ ಇ.ಎಂ. ಗುಳೇದ, ಎಸ್.ಪಿ. ಶಿರೋರ, ಆರ್.ಆರ್. ಪಟ್ಟಣ, ಎಸ್.ಚಂದ್ರಶೇಖರ ಇದ್ದರು.