ಸೀತಾನದಿ ಮಧ್ಯೆ ಧ್ವಜಾರೋಹಣ

kayaking
Published on

ಕೋಟ: ಸಾಲಿಗ್ರಾಮದ ಪಾರಂಪಳ್ಳಿ ಸೀತಾನದಿಯಲ್ಲಿ ಯುವಕರ ತಂಡ ವಿಭಿನ್ನವಾಗಿ ರೋಚಕ ಎನಿಸುವ ರೀತಿಯಲ್ಲಿ ರಾಷ್ಟ್ರ ಪ್ರೇಮವನ್ನು ಮೆರೆದಿದೆ.

ಸೀತಾ ನದಿಯ ಉಪನದಿಯಲಿ ್ಲಕಯಾಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಮಿಥುನ್ ಮೆಂಡನ್ ಮತ್ತು ಲೋಕೇಶ್ ಮೆಂಡನ್ ಅವರ ತಂಡ ಇದೀಗ ಈ ವಿಭಿನ್ನಪ್ರಯತ್ನದಲ್ಲಿ ಸೈ ಎನಿಸಿದೆ. ಸೀತಾ ನದಿಯ ಮಧ್ಯದಲ್ಲಿ ಕಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜ ಸ್ತಂಭ ಸೃಷ್ಟಿಸಿ ಊರ ಹಿರಿಯ ಗುರಿಕಾರ ಕೂಸ ಮರಕಾಲ ಇವರ ಮೂಲಕ ಧ್ವಜಾರೋಹಣ ನೆರವೇರಿಸಿದೆ. ಅನ್ನವಿತ್ತ ಪ್ರಕೃತಿ ಮಧ್ಯದಲ್ಲಿ ರಾಷ್ಟ್ರಪ್ರೇಮವನ್ನುಉತ್ತೇಜಿಸುತ್ತಿರುವ ಈ ತಂಡದ ಈ ಸಾಹಸವನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net