

ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢ ಸ್ವಾಮೀಜಿಯ ಭಾವಚಿತ್ರ ಹೊಂದಿರುವ ಅಂಚೆ ಚೀಟಿ ಮುದ್ರಿಸಿ ಬಿಡುಗಡೆ ಮಾಡಬೇಕೆಂದು ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ವತಿಯಿಂದ ರೈಲ್ವೆ ಮತ್ತು ಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಲಾಗಿದೆ.
ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ಅವರ ಮುಖಾಂತರ ದೆಹಲಿಯ ಹೊಸ ಸಂಸತ್ ಭವನದಲ್ಲಿ ಶ್ರೀಮಠದ ಪದಾಧಿಕಾರಿಗಳು ಹಾಗೂ ಧರ್ಮದಶಿರ್ಗಳೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ರೈಲ್ವೆ ಸಚಿವರನ್ನು ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ವೈಸ್ ಚೇರ್ಮನ್ ಉದಯಕುಮಾರ ನಾಯ್ಕ, ಧರ್ಮದಶಿರ್ಗಳಾದ ಮಂಜುನಾಥ ಮುನವಳ್ಳಿ, ಸಿದ್ದನಗೌಡ ಪಾಟೀಲ, ವಿನಾಯಕ ೂಡ್ಕೆ ಉಪಸ್ಥಿತರಿದ್ದರು.