ಉತ್ತರ ಕರ್ನಾಟಕದ ವಿಶ್ವಾಸಾರ್ಹ ಬ್ಯಾಂಕ್

Trusted Bank of North Karnataka
ಬಾಗಲಕೋಟೆ ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿ ಆವರಣದಲ್ಲಿರುವ ಬಸವ ಕಲಾ ವೇದಿಕೆಯಲ್ಲಿ ಭಾನುವಾರ ಸಂಜೆ ಬ್ಯಾಂಕಿನ 106ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿದರು.
Published on

ಬಾಗಲಕೋಟೆ: ಬಸವೇಶ್ವರ ಬ್ಯಾಂಕ್ ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯ ಅಳವಡಿಸಿಕೊಂಡಿದ್ದು, ಎಲ್ಲ ಶಾಖೆಗಳಿಗೂ ಕೋರ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಸೇರಿ ಅನೇಕ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿ ವಿಶ್ವಾಸಾರ್ಹ ವೃದ್ಧಿಸಿಕೊಂಡಿದೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿ ಆವರಣದಲ್ಲಿನ ಬಸವ ಕಲಾ ವೇದಿಕೆಯಲ್ಲಿ ಭಾನುವಾರ ಸಂಜೆ ಬ್ಯಾಂಕಿನ 106ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಬ್ಯಾಂಕ್ ತನ್ನ ಕ್ಷೇತ್ರ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬ್ಯಾಂಕು ಆರ್ಥಿಕ ಅಭಿವೃದ್ಧಿಗೆ ಸೀಮಿತವಾಗಿರದೇ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದೆ. ರಾಜ್ಯದಲ್ಲಿಯೇ ಬಹುಮುಖಿ ಸಂಸ್ಕೃತಿಯ ಸಹಕಾರದ ದೇಗುಲ ಎನಿಸಿಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 4.22 ಕೋಟಿ ರೂ. ಲಾಭ ಗಳಿಸಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ನೂತನ ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೀಜಾರ, ಕರ್ನಾಟಕ ವಿಧಾನ ಪರಿಷತ್ತಿನ 2021ನೇ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಎಸ್.ಆರ್. ಪಾಟೀಲ ಅವರನ್ನು ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರು ಗೌರವಿಸಿ ಸನ್ಮಾಸಿದರು.

ಬ್ಯಾಂಕ್ ನಿರ್ದೇಶಕರಾದ ಸಿ.ಟಿ. ಪಾಟೀಲ, ಎಚ್.ಎಸ್. ರಾಠೋಡ, ವಿ.ವಿ. ಶಿರಗಣ್ಣವರ, ಎಸ್.ಸಿ. ಆರಬ್ಬಿ, ವಿ.ವಿ. ಕಲಬುರ್ಗಿ, ಎಸ್.ಟಿ. ಬಳ್ಳಾರಿ, ಬಿ.ಎಂ. ಈಟಿ, ಎಸ್.ಎಸ್. ಕಂಕಣಮೇಲಿ, ಆರ್.ವೈ. ಪಟ್ಟಣದ, ಶಶಿಧರ ಜಿಗಳೂರ, ಎಸ್.ಎಸ್. ಗೋಡಿ, ಎನ್.ಎ್. ಪಲ್ಲೇದ, ಎಸ್.ಎಸ್. ಜಂಗಿ, ಜೆ.ಸಿ. ಅಬ್ದುಲಪುರ, ಯು.ಎಸ್. ಜಿಗಜಿನ್ನಿ, ಎನ್.ಆರ್. ಕುಲಕರ್ಣಿ, ಬಿ.ಎಸ್. ಹಿರೇಗೌಡರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಕೇಮಾಳಿ, ಪಿ.ಎನ್. ಹಳ್ಳಿಕೇರಿ ಉಪಸ್ಥಿತರಿದ್ದರು. ಅಧಿಕಾರಿಗಳಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಎಂ.ಎಸ್. ಗುಡಗುಂಟಿ, ವಿ.ಎಂ. ಹಿರೇಮಠ, ವೆಂಕಟೇಶ ರಾಠೋಡ, ಬಿ.ಜಿ. ಹೊನವಾಡ, ಮಹಾಸಭೆಯಲ್ಲಿ ವಿಷಯಗಳನ್ನು ಮಂಡಿಸಿ ಒಪ್ಪಿಗೆ ಪಡೆದರು. ಎಂ.ಜಿ. ವಾಲಿ ವಂದಿಸಿದರು.

ಸಂಜಯ ನಡುವಿನಮನಿ, ಮಹಾಬಳೇಶ್ವರ ಗುಡಗುಂಟಿ ನಿರೂಪಿಸಿದರು. ದೂರದರ್ಶನ ಕಲಾವಿದ ಸಂತೋಷ ಗದ್ದನಕೇರಿ ಹಾಗೂ ಮಂಜುಳಾ ಸಂಬಾಳಮಠ ತಂಡದಿಂದ ಸಂಗೀತ ಸೇವೆ ನಡೆಯಿತು.

ಬಸವೇಶ್ವರ ಬ್ಯಾಂಕು ಸಾಲ ವಸೂಲಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತದೆ. ಶತಮಾನೋತ್ಸವ ಆಚರಿಸಿದ ಬ್ಯಾಂಕ್ ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ರಾಜ್ಯಮಟ್ಟದ ಹಲವು ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿದೆ. ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ 4 ದಶಕಗಳಿಂದ ಬ್ಯಾಂಕ್ ಸಾರಥ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಎಸ್.ಆರ್. ಪಾಟೀಲ, ವಿ.ಪ. ಮಾಜಿ ಸದಸ್ಯ

ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

ವಿದ್ಯಾಚೇತನ ಯೋಜನೆಯಡಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಚಿದಾನಂದ ಪ್ರಕಾಶ ಪಠಾಣ ಹಾಗೂ ದ್ವಿತಿಯ ಸ್ಥಾನ ಪಡೆದ ಅರ್ಪಿತಾ ಸಂತೋಷ ಕುಬಕಡ್ಡಿ, ಸುಪ್ರಿಯಾ ಚಿದಾನಂದ ಶೆಟ್ಟೆಪ್ಪನವರ, ಸಹನಾ ಹನಮಪ್ಪ ಜಂಬಗಿ, ಸಹನಾ ಜಿ.ಎಸ್, ವಿಜಯಲಕ್ಷ್ಮೀ, ಸಂಗಮೇಶ ಹುಲ್ಯಾಳ ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದೀಪಾ ಕಂಬಾರ, ವಿಜ್ಞಾನ ವಿಭಾಗದಲ್ಲಿ ಸೃಷ್ಟಿ ಶಂಕರ ಪಾಲಬಾವಿ, ಸಾಗರ ಧರೆಪ್ಪ ಮೇತ್ರಿ, ವರ್ಷಿಣಿ ಆನಂದ ಹಗೇದಾಳ, ವಾಣಿಜ್ಯ ವಿಭಾಗದಲ್ಲಿ ಅನನ್ಯ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಧನ ನೀಡಲಾಯಿತು. ಮಹಿಳೆಯರ ಉಚಿತ ಕೌಶಲ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ತರಬೇತುದಾರರಿಗೆ ಪ್ರಮಾಣ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net