ಸಮಾಜದ ವಿಶ್ವಾಸ ಗಳಿಸುವ ಕೆಲಸವಾಗಲಿ

23 Sirwar 1
Published on

ಸಿರವಾರ: ಪ್ರತಿಯೊಬ್ಬರೂ ಬಿಡುವಿನ ವೇಳೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎನ್.ಉದಯ ಕುಮಾರ ಹೇಳಿದರು.

ಪಟ್ಟಣದಲ್ಲಿ ಲಯನ್ಸ್ ಕ್ಲಬ್ ವಾರ್ಷಿಕೋತ್ಸವದಲ್ಲಿ ಭಾನುವಾರ ಮಾತನಾಡಿದರು. ನಾನು ಅಧ್ಯಕ್ಷನಾಗಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ, ಆರೋಗ್ಯ ತಪಾಸಣೆ, ಮಧುಮೇಹ ತಪಾಸಣೆ ಶಿಬಿರ, ಪರಿಸರ ರಕ್ಷಣೆ ಮತ್ತು ಸಸಿ ನೆಡುವ ಕಾರ್ಯಕ್ರಮ, ಮೃತ ದೇಹ ಇಡುವ ರೆಫ್ರಿಜರೇಟರ್ ಸೌಲಭ್ಯ ಸೇರಿ ಅನೇಕ ಸಾಮಾಜಿಕ ಕಾರ್ಯಕ್ರ ನಡೆಸಿರುವುದಾಗಿ ತಿಳಿಸಿದರು.

ಸಮಯ ಪ್ರಜ್ಞೆ, ಶಿಸ್ತು, ಸಾಮಾಜಿಕ ಕಳಕಳಿ ಮೂಲಕ ಕೆಲಸ ಮಾಡಬೇಕು. ಸಾಮಾಜಿಕ ಬದಲಾವಣೆ ಲಯನ್ಸ್ ಕ್ಲಬ್ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರೂ ಸಮಾಜದ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದು ಉದಯ ಕುಮಾರ ತಿಳಿಸಿದರು.

ಪ್ರಮುಖರಾದ ನರಸಿಂಹರಾವ್ ಕುಲಕರ್ಣಿ, ಎನ್.ಆರ್.ಪಾಟೀಲ್, ಶ್ರೀಶೈಲ ಅಚ್ಚಾ, ಚುಕ್ಕಿ ಉಮಾಪತಿ, ಮಲ್ಲಿಕಾರ್ಜುನ್ ಹೂಗಾರ್, ಬಸವರಾಜ ಪಾಟೀಲ್ ಆರ್.ಕೆ, ರವಿರಾಜ್ ಕಳಸ, ವೀರಭದ್ರಪ್ಪ ಬೆಣ್ಣೆ, ಹಾಜಿ ಚೌದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net