ಹಾಡಿಗೆ ಟ್ರಸ್ಟ್ ಸದಸ್ಯರ ಭೇಟಿ

Trust members' visit to Hadi
Published on

ಮಡಿಕೇರಿ:

ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಟ್ರಸ್ಟಿ ಹಾಗೂ ಕಾನೂನು ಘಟಕದ ಮುಖ್ಯಸ್ಥರು ಮಂಗಳವಾರ ಕುಶಾಲನಗರ ತಾಲೂಕು ರಂಗಸಮುದ್ರದ ಕಟ್ಟೆ ಹಾಡಿಗೆ ಭೇಟಿ ನೀಡಿ ಹಾಡಿ ಜನರ ಕುಂದು ಕೊರತೆಗಳ ಮಾಹಿತಿ ಸಂಗ್ರಹಿಸಿದರು.\

ಸುAಟ್ಟಿಕೊಪ್ಪದ 7ನೇ ಹೊಸಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ನ ಹಲವು ಉದ್ದೇಶಗಳಲ್ಲಿ ಒಂದಾದ ಹಾಡಿ ಜನರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಮಾನವೀಯತೆ ಸಂಸ್ಥೆಯ ವತಿಯಿಂದ ಸಂಬAಧ ಪಟ್ಟ ಇಲಾಖೆಗೆ ಮಾಹಿತಿ ನೀಡಿ ಅವರಿಗೆ ಬರಬೇಕಾದ ಸವಲತ್ತುಗಳನ್ನು ಒದಗಿಸುವ ಬಗ್ಗೆ ಹಾಗೂ ಮೂಲ ಸೌಕರ್ಯ ಪಡೆಯದ ಹಾಡಿ ಜನರಿಗೆ ಮಾನವೀಯತೆ ಸಂಸ್ಥೆಯ ಮೂಲಕ ಸಹಾಯ ಹಸ್ತ ನೀಡುವುದರ ಬಗ್ಗೆ ಕಟ್ಟೆ ಹಾಡಿಯ ಜನರೊಂದಿಗೆ ಸಮಾಲೋಚನೆ ನಡೆಸಲಾಯಿತು.

ರಂಗಸಮುದ್ರದ ಕಟ್ಟೆಹಾಡಿಗೆ ತಂಡ ಭೇಟಿ ನೀಡಿದಾಗ ಕಟ್ಟೆಹಾಡಿಯ ಜನರು ಸಮಸ್ಯೆಗಳ ಬಗ್ಗೆ ಲಿಖಿತ ಮನವಿ ಪತ್ರ ಕೊಟ್ಟರು. ಈಗಿನ ಯುಗದಲ್ಲಿಯೂ ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಇವರು ಗುಡಿಸಿಲಿನಲ್ಲಿ ಬದುಕುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ. ವಿದ್ಯುತ್ ಇಲ್ಲದೆ ಮಕ್ಕಳಿಗೆ ಓದುವುದಕ್ಕೆ ದೊಡ್ಡ ಸಮಸ್ಯೆಯನ್ನು ಹಾಡಿಯ ಕೆಲವು ಮಕ್ಕಳು ಅನುಭವಿಸುತ್ತಿರುವುದು ಕಂಡುಬAದಿದ್ದು ಈ ವಿಷಯಕ್ಕೆ ಸಂಬAಧಿಸಿದAತೆ ಸಂಬAಧ ಪಟ್ಟ ಇಲಾಖೆಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುವುದು ಎಂದು ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಈ ಸಂದರ್ಭ ತಿಳಿಸಿದರು.

ಟ್ರಸ್ಟಿಗಳಾದ 7ನೇ ಹೊಸಕೋಟೆಯ ಸೌಮ್ಯಶ್ರೀ ಮತ್ತು ಪ್ರಾದೇಶಿಕ ಆಡಳಿತ ಅಧಿಕಾರಿ ಸ್ಟೇನಿ ಜೋಸೆಫ್, ಕಾನೂನು ಘಟಕದ ಮುಖ್ಯಸ್ಥೆ ಮೊನಾಲಿಸಾ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net