

ಚಿಕ್ಕೋಡಿ: ಸಂಘ, ಸಂಸ್ಥೆಗಳು ಪರಸ್ಪರ ಸಹಕಾರ ಮತ್ತು ವಿಶ್ವಾಸದ ತಳಹದಿ ಮೇಲೆ ಬೆಳೆಯುತ್ತವೆ ಎಂದು ಸಂಘದ ಅಧ್ಯಕ್ಷ ಸುನೀಲ ಖಡ್ಡ ಹೇಳಿದರು.
ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ತಾಲೂಕು ವೂರ್ವಭಾಗದ ಶಿಕ್ಷಕರ ಸಹಕಾರಿ ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ 60ನೇ ವಾರ್ಷಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ಆರ್ಥಿಕ ವರ್ಷದಲ್ಲಿ ಸಂಘ 50.67 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಸಹಕಾರಿಯು 731 ಸದಸ್ಯರು ಹಾಗೂ 4.46 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಶೇ.8.50 ಲಾಭಾಂಶ ವಿತರಿಸಿದೆ ಎಂದರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಅರಭಾಂವಿ, ಶಿಕ್ಷಕರ ತಾಲೂಕು ಅಧ್ಯಕ್ಷ ಎಸ್.ಎಸ್.ದುಪದಾಳ,ನಿರ್ದೇಶಕಿ ಶಿವಲೀಲಾ ಹಿಪ್ಪರಗಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ ಪ್ರೋತ್ಸಾಹ ನೀಡಿ ಗೌರವಿಸಲಾಯಿತು. ಜಿ.ಎಂ.ಕಾಂಬಳೆ, ಲಕ್ಷ್ಮೀ ಶಿವಾಯಿಗೋಳ, ಎಸ್.ಎನ್.ಬೆಳಗಾವಿ, ಪಿ.ಸಿ.ಪಾಯನ್ನವರ, ಮೋಸಿನ್ ಪಟೇಲ್, ಎಸ್.ಎಸ್.ಸಾರಾಪೂರೆ, ಸಿ.ಎಲ್.ಯಾದಗೂಡೆ, ಎನ್.ಎಸ್.ಕಾಂಬಳೆ, ಆರ್.ಕೆ.ಕಾಂಬಳೆ, ಎನ್.ಜಿ.ಪಾಟೀಳ,
ವಿಶ್ವನಾಥ ಧುಮಾಳ, ಸದಾಶಿವ ಖೋತ, ಉಮೇಶ ತೋಟದ, ದಿಲೀಪ ಕಾಂಬಳೆ ಇತರರಿದ್ದರು.