ವಿಶ್ವಾಸಕ್ಕೆ ಪಡೆದು ಪ್ರಚಾರ ಮಾಡಿ

24 HHR P 05 (1)
ಲೋಕಸಭಾ ಚುನಾವಣೆ ಪ್ರಯುಕ್ತ ಮಂಗೋಟೆ ಬಿಜೆಪಿ ಕಾರ್ಯಕರ್ತರು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ 25 ಸಾವಿರ ರೂ. ಠೇವಣಿ ಹಣ ನೀಡಿದರು. ಮಂಜುನಾಥ್, ಪಿ.ಬಿ ರಮೇಶ್, ಷಡಾಕ್ಷರಪ್ಪಗೌಡ ಇತರರಿದ್ದರು.
Published on

ಹೊಳೆಹೊನ್ನೂರು: ಸಮೀಪದ ಮಂಗೋಟೆಯ ಬಿಜೆಪಿ ಕಾರ್ಯಕರ್ತರು ಭಾನುವಾರ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿಯಾಗಿ ಲೋಕಸಭೆ ಚುನಾವಣೆಗೆ ಠೇವಣಿ ಹಣ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದ ಬಿಜೆಪಿ ಕಾರ್ಯಕರ್ತರು 25 ಸಾವಿರ ರೂ. ಹೊಂದಿಸಿಕೊಂಡು ಆನವೇರಿಯ ಹಿರಿಮಾವುರದಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಸದರಿಗೆ ನೀಡಿದರು. ಕಾರ್ಯಕರ್ತರು ನೀಡಿದ ಠೇವಣಿ ಹಣ ಪಡೆದ ಬಿ.ವೈ.ರಾಘವೇಂದ್ರ ಮಾತನಾಡಿ, ಗ್ರಾಮದ ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಕೈಗೊಳ್ಳಬೇಕು. ವಿಧಾನ ಸಭೆ ಚುನಾವಣೆಯ ವೈಮನಸ್ಸುಗಳನ್ನು ಸೇರಿ ಹಳೇ ಮನಸ್ತಾಪಗಳನ್ನು ಶಮನ ಮಾಡಿಕೊಂಡು ಜೆಡಿಎಸ್ ಕಾರ್ಯಕರ್ತರೊಂದಿಗೆ ಒಗ್ಗಟ್ಟಾಗಬೇಕು. ಅತಿಯಾದ ಆತ್ಮವಿಶ್ವಾಸ ಬೇಡ ಎಂದರು. ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಯುವ ಮೊರ್ಚಾ ಉಪಾಧ್ಯಕ್ಷ ಪಿ.ಬಿ.ರಮೇಶ್, ಮಾಜಿ ಎಪಿಎಂಸಿ ಸದಸ್ಯ ಶ್ರೀನಿವಾಸ್, ಮಾಜಿ ಭದ್ರಾ ಕಾಡ ಸದಸ್ಯ ಷಡಾಕ್ಷರಪ್ಪ ಗೌಡ, ವೈದ್ಯ ಡಾ. ಧನಂಜಯ್ ಸರ್ಜಿ, ಎಂ.ವೈ.ಮಲ್ಲಿಕಾರ್ಜುನ್, ಎಂ.ಎಚ್.ಬಸವರಾಜಪ್ಪ, ರುದ್ರೇಶ್, ಪ್ರಕಾಶ್, ಮಹೇಶ್ವರಪ್ಪ, ಗಂಗಾಧರ್, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net