

ರಬಕವಿ/ಬನಹಟ್ಟಿ: ರಬಕವಿ ಗುರುಸಿದ್ಧೇಶ್ವರ ಶ್ರೀಗಳು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಅಂತರಂಗದಲ್ಲಿ ಸುದ್ದಿಯಾಗಿದ್ದಾರೆ ಎಂದು ದಾವಣಗೆರೆಯ ಶಿವಯೋಗಾಶ್ರಮ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಹೇಳಿದರು.
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಸೋಮವಾರ ರಾತ್ರಿ ನಡೆದ ಬ್ರಹ್ಮಾನಂದ ಉತ್ಸವ ಸಮಾರಂಭದ ಕಾರ್ತಿಕೋತ್ಸವ, ಅನುಭಾವದಂಗಳ, ಮಹಾತ್ಮರ ಚರಿತಾಮೃತ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನದಲ್ಲಿರುವ ಮಲಿನತೆ ಹೊಡೆದೋಡಿಸಲು, ತೊಳೆದುಹಾಕಲು ಇಂಥಹ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಲಿಸಬೇಕು ಎಂದರು.
ಗುಳೇದಗುಡ್ಡದ ಗುರುಸಿದ್ಧೇಶ್ವರ ಬ್ರಹ್ಮನ್ಮಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಮಾತನಾಡಿ, ಎಲ್ಲರೂ ಒಂದಿಷ್ಟು ದಾನ ಧರ್ಮದತ್ತ ಚಿತ್ತವನಿಟ್ಟು ಬದುಕು ಸಾಗಿಸಬೇಕು ಎಂದು ತಿಳಿಸಿದರು.
ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳು, ನಗರದ ವಿರಕ್ತ ಮಠದ ಗುರುಮಹಾಂತ ಸ್ವಾಮಿಗಳು, ಮರೆಗುದ್ದಿ ಮಹಾಂತಮಠದ ನೀಲಮ್ಮತಾಯಿ ಮಾತನಾಡಿದರು.
ರನ್ನುಬೆಳಗಲಿ ಸಿದ್ಧಾರೂಢ ಮಠದ ಸಿದ್ಧರಾಮ ಶಿವಯೋಗಿಗಳು, ಬಸವಲಿಂಗಯ್ಯ ಹಿಡಕಲ್ ಮಠ, ಶಂಕ್ರಯ್ಯ ಹಿಡಕಲ್ ಮಠ, ಧಾರಿಣಿ ಕುಚನೂರ, ರುಚಿತಾ ವಿಜಯಪುರ, ದಾಸೋಹ ಸೇವೆ ಮಾಡಿದ ಹಾರೂಗೇರಿಯ ಮಹಾದೇವ ಮತ್ತು ಹನುಮಂತ ಉಪ್ಪಾರ ಸಹೋದರರು ಇದ್ದರು.
ಶ್ರೀಮಠದ ಗುರುಸಿದ್ಧೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ ಮುತ್ತೂರು ನಿರೂಪಿಸಿದರು.
ಅವಳಿ ನಗರ ಸೇರಿ ತಾಲೂಕಿನ ಅನೇಕ ಗ್ರಾಮಗಳ ಹಲವಾರು ಭಕ್ತರು ಭಾಗವಹಿಸಿದ್ದರು.