ಮಾನವೀಯ ಮೌಲ್ಯ ಹೊಂದುವುದೇ ನಿಜವಾದ ಶಿಕ್ಷಣ: ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜಶೇಖರ ಶೆಟ್ಟಿ ಅಭಿಪ್ರಾಯ

16
Published on

ಮೈಸೂರು:  ವಿದ್ಯಾಭ್ಯಾಸವೇ ಶಿಕ್ಷಣವಲ್ಲ, ಅದರಿಂದಾಚೆಗಿನ ಮಾನವೀಯ ಮೌಲ್ಯಗಳನ್ನು ಹೊಂದುವುದೇ ನಿಜವಾದ ಶಿಕ್ಷಣ ಎಂದು ಶಕ್ತಿ ನಗರದ ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜಶೇಖರ ಶೆಟ್ಟಿ ಅಭಿಪ್ರಾಯಪಟ್ಟರು.

ಶಕ್ತಿ ನಗರದ ಜೆಎಸ್‌ಎಸ್ ಪ್ರೌಢಶಾಲೆ ಆವರಣದಲ್ಲಿ ಹಿರಣ್ಮಯಿ ಟ್ರಸ್ಟ್ ಹಾಗೂ ಕಾವೇರಿ ಬಳಗ ಆಯೋಜಿಸಿದ್ದ ಶನಿವಾರ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಂದೆ ಉನ್ನತ ಶಿಕ್ಷಣ ಪಡೆದು ತಂದೆ, ತಾಯಿ ಹಾಗೂ ಶಾಲೆಗೆ ಕೀರ್ತಿ ತನ್ನಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳನ್ನು ಎದುರಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ, ಹಿರಣ್ಮಹಿ ಪ್ರತಿಷ್ಠಾನ ಅಧ್ಯಕ್ಷ ಎ.ಸಂಗಪ್ಪ, ಸಾಹಿತಿ ಡಾ.ಜಮುನಾ ರಾಣಿ ಮಿರ್ಲೆ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದರಾಮಯ್ಯ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಸಾಹಿತಿ ಎಂ.ಮುತ್ತುಸ್ವಾಮಿ ಮಾತನಾಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿ ಆರು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸಮಾಜ ಸೇವಕ ಶ್ರೀ ಕಂಠಮೂರ್ತಿ, ಶಿಕ್ಷಕಿಯರಾದ ಪಾರ್ವತಮ್ಮ, ರೂಪಶ್ರೀ, ಎಂ.ಪಿ.ಜ್ಯೋತಿ, ಚೈತ್ರಾ, ಶೀಲಾ ಹಾಗೂ ಮಹಾದೇವಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net