ನಿವಾರಣೆಯಾಗದ ಸರ್ವರ್ ಸಮಸ್ಯೆ

26 ylb photo 01
ಯಲಬುರ್ಗಾ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಗಣತಿಕಾರ್ಯ ನಡೆಸುತ್ತಿರುವ ಶಿಕ್ಷಕರು.
Published on

ಯಲಬುರ್ಗಾ: ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಗಣತಿ ಕಾರ್ಯಕ್ಕೆ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದರಿಂದ ಸಾರ್ವಜನಿಕರು ಮತ್ತು ಗಣತಿದಾರರು ಸಂಕಷ್ಟ ಅನುಭವಿಸುವಂತಾಗಿದೆ. ಆಧಾರ್‌ಕಾರ್ಡ್, ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿ ನೀಡಿ ಮಾಹಿತಿ ಒದಗಿಸಿದರೂ ಆನ್‌ಲೈನ್ ಸಮಸ್ಯೆಯಿಂದ ಅಪ್ಲೋಡ್‌ಗೆ ತೊಂದರೆಯಾಗುತ್ತಿದೆ. ಇದರಿಂದ ಮತ್ತೊಮ್ಮೆ ಮಾಹಿತಿ ನೀಡಲು ಜನರು ಬೇಸರ

ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಡೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ ಅಪ್ಲೋಡ್ ಮಾಡಬೇಕು ಎನ್ನುವಷ್ಟರಲ್ಲಿ ಸರ್ವರ್ ಸಮಸ್ಯೆಯಾಗುತ್ತಿದೆ. ಆಧಾರ್ ಒಟಿಪಿ ಬೇಗ ಸಿಗುವುದಿಲ್ಲ. ಕೆಲವು ಕಡೆ ಸಾರ್ವಜನಿಕರು ಗಣಿತಿದಾರರನ್ನು ಬೈಯುತ್ತಿದ್ದಾರೆ. ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಕೇಳುತ್ತೀರಿ? ಮೊದಲು ಮೊಬೈಲ್ ಆ್ಯಪ್ ಸರಿ ಮಾಡಿಸಿಕೊಂಡು ಬನ್ನಿ. ನಮ್ಮ ಸಮಯ ಯಾಕೆ ವ್ಯರ್ಥ ಮಾಡುತ್ತಿರಿ ಎಂದು ಕೇಳುತ್ತಿದ್ದಾರೆ ಎಂದು ಸಮೀಕ್ಷೆಗೆ ಬಂದ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net