ಶನಿ ಸ್ಮರಣೆಯಿಂದ ಸಂಕಷ್ಟ ದೂರ

23Ainapur1
Published on

ಐನಾಪುರ: ಸಮೀಪದ ಮದಬಾವಿ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ಶನಿ ಅಮಾವಾಸ್ಯೆಯ ನಿಮಿತ್ತ ತೆಲಾಭಿಷೇಕ, ಶಾಂತಿಹೋಮವನ್ನು ಶನಿವಾರ ನೆರವೇರಿಸಲಾಯಿತು.

ಧರ್ಮಾಧಿಕಾರಿ ಮಾರುತಿ ಭಂಡಾರಿ ಮಾತನಾಡಿ, ಶ್ರೀ ಶನೇಶ್ವರ ದೇವರು ನ್ಯಾಯದೇವತೆಯಾಗಿದ್ದು, ಪ್ರತಿ ರಾಶಿಗಳಲ್ಲಿ ಬಂದು ಹೋಗುತ್ತಾರೆ ಕಾರಣ ಪ್ರತಿಯೊಬ್ಬರು ಶುದ್ಧಕರ್ಮಗಳನ್ನು ಮಾಡುತ್ತಾ, ಬಡವರು, ದೀನದಲಿತರು, ಪಶು& ಪಗಳು, ಗೋಮಾತೆಯನ್ನು ಪ್ರೀತಿಯಿಂದ ಕಂಡು ಸೇವೆ ಮಾಡುವುದರಿಂದ ಶನಿ ಪರಮಾತ್ಮನು ಸಂತುಷ್ಟನಾಗುತ್ತಾನೆ ಎಂದರು.

ಅರ್ಚಕ ಪ್ರವಿಣ್​ ಶಾಸ್ತ್ರಿ ಹಿರೇಮಠ ಮಾತನಾಡಿ, ಶನೀಶ್ವರ ಭಕ್ತರಿಗೆ ಬೇಡಿದ ವರ ಕೊಡುವ ಭಾಗ್ಯವಿಧಾತ ಆಗಿದ್ದು, ಸಾಡೇಸಾತಿ, ನೌಕರಿ ತೊಂದರೆ, ಆರ್ಥಿಕ ಹಾನಿ, ಅಷ್ಟಮ ಶನಿ, ಕುಟುಂಬದಲ್ಲಿ ಅಶಾಂತಿ, ಉದ್ಯೋಗ ನಷ್ಟದಂತಹ ಸಮಸ್ಯೆಗಳು ತಲೆದೋರಿದಾಗ ಸ್ವಾಮಿಯನ್ನು ಭಕ್ತಿಯಿಂದ ನೆನೆದರೆ ಬಂದ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ಎಂದು ಹೇಳಿದರು.

ಹೋಮ ಹಾಗೂ ತೆಲಾಭಿಷೇಕದಲ್ಲಿ ಭಾಗವಹಿಸಿದ ಭಕ್ತರಿಗೆ ಕುಬೇರಯಂತ್ರ, ಶನಿಯಂತ್ರ ವಿತರಿಸಲಾಯಿತು. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪ್ರಸಾದ ಏರ್ಪಡಿಸಲಾಗಿತ್ತು.

ವಾಗೀಶ ಉಜ್ಜಯಿನಿ ಮಠದ ಸೋಮಶೇಖರಯ್ಯ ಹಿರೇಮಠ, ಚಂದ್ರಶೇಖರ ಹಿರೇಮಠ, ನಂದಕುಮಾರ ಅಚ್ಚಟರಾವ್​, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net