ತೊಂದರೆ ಆಗದಂತೆ ಕಟಾವಿಗೆ ವ್ಯವಸ್ಥೆ

25blh1 someshwar sigars
Published on

ಬೈಲಹೊಂಗಲ: ಶ್ರೀಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಶೇ.11.50 ಇಳುವರಿ ಪ್ರಮಾಣದಲ್ಲಿ 4 ಲ ಮೆಟ್ರಿಕ್​ ಟನ್​ ಕಬ್ಬು ಅರೆದು ಸಕ್ಕರೆ ಉತ್ಪಾದಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆ ಅಧ್ಯ ಬಸವರಾಜ ಬಾಳೇಕುಂದರಗಿ ಹೇಳಿದರು.

ತಾಲೂಕಿನ ಸಿದ್ದಸಮುದ್ರ ಬಳಿ ಇರುವ ಶ್ರೀಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 2024&25ನೇ ಸಾಲಿನ ಬಾಯ್ಲರ್​ ಪ್ರದಿಪನ ಮತ್ತು ಕಬ್ಬು ಅರೆಯುವ ಹಂಗಾಮಿನಲ್ಲಿ ಮಾತನಾಡಿ, ಕಬ್ಬು ಬೆಳೆಗಾರರು, ರೈತರಿಗೆ ತೊಂದರೆ ಆಗದಂತೆ ಕಬ್ಬು ಕಟಾವಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕೆಂದರು.

ಕಾರ್ಖಾನೆಯಿಂದ 100 ಕೆಎಲ್​ಪಿಡಿ ಎಥೆನಾಲ್​ ಟಕ ಸ್ಥಾಪನೆ, 2500 ಟಿಸಿಡಿಯಿಂದ 4500 ಟಿಸಿಡಿ ಕಬ್ಬು ಅರೆಯುವ ಸಾಮರ್ಥ್ಯ ಮತ್ತು 6 ಮೆಗಾನಿಂದ 12 ಮೆಗಾ ಸಾಮರ್ಥ್ಯದ ಕೋ&ಜನರೇಶನ್​ ಟಕ ವಿಸ್ತರಣೆ ಹಾಗೂ ಆಧುನಿಕರಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹೊಸೂರ ಶ್ರೀ ಗುರು ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ನಯಾನಗರದ ಸುಖದೇವಾನಂದಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಕಾರ್ಖಾನೆ ಪ್ರಗತಿಗೆ ಕೈ ಜೋಡಿಸಬೇಕೆಂದರು.

ನಿರ್ದೇಶಕ ಮಲ್ಲಪ್ಪ ಅಷ್ಟಗಿ ಮಾತನಾಡಿ, ಖಾಸಗಿ ಕಾರ್ಖಾನೆಗಳ ಪೈಪೋಟಿ ಮಧ್ಯ ರೈತರಿಗೆ ಉತ್ತಮ ಸೇವೆ ನೀಡುತ್ತಿರುವ ಸೋಮೇಶ್ವರ ಕಾರ್ಖಾನೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಸಂಸ್ಥಾಪಕರಾದ ದಿ.ರಮೇಶ ಬಾಳೇಕುಂದರಗಿ ಅವರ ಪುತ್ಥಳಿಗೆ ಗೌರವ ಸಲ್ಲಿಸಲಾಯಿತು. ನಿರ್ದೇಶಕ ರಾಚಪ್ಪ ಮಟ್ಟಿ ದಂಪತಿಯಿಂದ ಪೂಜೆ ಹಾಗೂ ತುರಮರಿ ಗ್ರಾಮದ ನೇತೃತ್ವದಲ್ಲಿ ಹೋಮ ಜರುಗಿತು.

ಕಾರ್ಖಾನೆಗೆ ಹೆಚ್ಚು ಕಬ್ಬು ಪೂರೈಸಿದ ರೈತರನ್ನು ಸನ್ಮಾನಿಸಲಾಯಿತು. ಕಾರ್ಖಾನೆ ಉಪಾಧ್ಯ ಮಹಾಂತೇಶ ಮತ್ತಿಕೊಪ್ಪ, ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ, ನಿರ್ದೇಶಕರಾದ ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ, ಅಶೋಕ ಯರಗೊಪ್ಪ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭಿಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ, ಮುರುಳೀಧರ ಮಲ್ಲೂರ, ಬಸವರಾಜ ಬೋಳಗೌಡರ, ಸಿದ್ಧನಗೌಡ ಪಾಟೀಲ, ಶ್ರೀಶೈಲ ಮೂಗಬಸವ, ಮಹಾಂತೇಶ ಶಾಸಿ, ಕಾರ್ಯದರ್ಶಿ ಅಶೋಕ ಬೊಮ್ಮನ್ನವರ, ಬಾಬು ಖಂಡೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net