ಬಳ್ಳಾರಿ : ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮ ಸೇನೆ ಸಂಘಟನೆಯಿಂದ ರಾಜ್ಯದ ನೂರು ಕಡೆ ತ್ರಿಶೂಲ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿಯೂ ಕೂಡ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಇಲ್ಲಿನ ಅತಿಥಿ ಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲವ್ ಜಿಹಾದ್ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ತಂದೆ, ತಾಯಿ ಪೋಷಕರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ನಡೆಸಲಾಗುತ್ತದೆ. ಲವ್ ಜಿಹಾದ್ ಇಂದು ಭಯಾನಕ ಪರಿಸ್ಥಿತಿಗೆ ಬಂದಿದೆ. ಇಡೀ ಜಗತ್ತನ್ನು ಇಸ್ಲಾಮಿಕ್ ಮಾಡುವ ಗುರಿ ಹೊಂದಿ, ಬೇರೆ ಬೇರೆ ರೂಪದಲ್ಲಿ ವಿವಿಧ ಪ್ರಯತ್ನ ನಡೆಸಲಾಗುತ್ತದೆ. ಅದರಲ್ಲಿ ಲವ್ ಜಿಹಾದ್ ಸಹ ಒಂದು. ಜನಸಂಖ್ಯೆ ಹೆಚ್ಚು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರೀತಿ, ಪ್ರೇಮ ಹೆಸರಿನಲ್ಲಿ ಲವ್ ಜಿಹಾದ್ ವ್ಯವಸ್ಥಿತವಾಗಿ ಜಾಲ ನೆಲೆಯೂರಿದೆ. 2019-21ರಲ್ಲಿ 13ಲಕ್ಷ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿದಂತೆ ದಾಖಲಾಗಿದ್ದು, ಇದರಲ್ಲಿ 2.51 ಲಕ್ಷ ಅಪ್ರಾಪ್ತರಿದ್ದಾರೆ. ಲವ್ ಜಿಹಾದ್‌ಗೆ ಒಳಗಾದ ಶ್ರೀರಾಮ ಸೇನೆಯಿಂದ 4700 ಮಹಿಳೆಯರನ್ನು ವಾಪಸ್ ತರಲಾಗಿದೆ. ದೇಶದ ಮುತಾಲಿಕ್ ಅವರಿಗೆ ಮದುವೆಯಾಗಿಲ್ಲ, ಅವರು ಏನೇನು ಹೇಳಿಕೊಂಡು ಹೋಗುತ್ತಿದ್ದಾರೆಂದು ಅನೇಕರು ಆರೋಪಿಸಿದ್ದಾರೆ. ಮೂರು ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಸಹ ರಚನೆಯಾಗಿದೆ. ಹೀಗಾಗಿ, ಮಹಿಳೆಯರಿಗೆ, ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎರಡನೇ ಆವೃತ್ತಿ ಮೂಲಕ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುಷ್ಠಿಕರಣ ಮೂಲಕ ವಕ್ಪ್ ಬೋರ್ಡ್‌ನಿಂದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತದೆ. ಇತ್ತೀಚೆಗೆ ಕಾಂಗ್ರೆಸ್‌ನವರ ಮನೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಅವರ ಬುಡಕ್ಕೆ ಬೆಂಕಿ ಬರುತ್ತದೆ ಎಂದು ಅಕ್ರೋಶ ಹೊರಹಾಕಿದರು.