

ಹುಬ್ಬಳ್ಳಿ: ಚೀನಾದಲ್ಲಿ ಅಕ್ಟೋಬರ್ 18ರಿಂದ 28ರವರೆಗೆ ನಡೆಯಲಿರುವ 19ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ಗೆ ಹುಬ್ಬಳ್ಳಿಯ ತ್ರಿಷಾ ಜಡಾಲ ಆಯ್ಕೆಯಾಗಿದ್ದಾರೆ.
ಇಲ್ಲಿಯ ಜೆ.ಜಿ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ತ್ರಿಷಾ, ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಏಷ್ಯನ್ ಸ್ಕೇಟಿಂಗ್ ಚಾಂಪಿಯನ್ಶಿಪ್ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸ್ಕೇಟರ್ ಆಗಿದ್ದಾರೆ.