ತ್ರಿಷಾಗೆ ಕಂಚಿನ ಪದಕ

TRISHA BRONZE
Published on

ಹುಬ್ಬಳ್ಳಿ: ಇಟಲಿಯಲ್ಲಿ ಆಯೋಜಿಸಿದ್ದ ವಿಶ್ವ ಸ್ಕೇಟ್ ಗೇಮ್ಸ್​ನಲ್ಲಿ ಹುಬ್ಬಳ್ಳಿಯ ತ್ರಿಷಾ ಜಡಾಲ ಕಂಚಿನ ಪದಕ ಗೆದ್ದಿದ್ದಾರೆ.

ತ್ರಿಷಾ ಇಲ್ಲಿಯ ಕೆಎಲ್​ಇ ಸಂಸ್ಥೆಯ ಜೆ.ಜಿ. ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ‘ಕಳೆದ 9 ವರ್ಷಗಳಿಂದ ಸ್ಕೇಟಿಂಗ್ ಕ್ರೀಡೆಯನ್ನು ಆನಂದಿಸುತ್ತಿದ್ದೇನೆ. ಕಠಿಣ ಪರಿಶ್ರಮ, ಕೋಚ್ ಹಾಗೂ ಮನೆಯವರ ಸಹಕಾರದಿಂದ ಇಂದು ಜಾಗತಿಕ ಮಟ್ಟದಲ್ಲಿ ಪದಕ ಗೆಲ್ಲಲು ಸಾಧ್ಯವಾಯಿತು. ಇಲ್ಲಿಯವರೆಗಿನ ಪ್ರಯಾಣ ಸವಾಲಿನದಾಗಿತ್ತು ಹಾಗೂ ವಿಶ್ವ ಸ್ಕೇಟ್ ಗೇಮ್ಸ್​ನಲ್ಲಿ ಪದಕ ಗೆಲ್ಲುವುದರೊಂದಿಗೆ ಪಟ್ಟ ಪರಿಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ’ ಎಂದು ತ್ರಿಷಾ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net