

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ತ್ರಿನೇತ್ರ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ನಿಮಿತ್ತ ಮೇ 5ರಿಂದ 12ರ ವರೆಗೆ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
5ರಂದು ಹುಬ್ಬಳ್ಳಿಯ ಮಹಾಚಾರ್ಯ ವಿದ್ಯಾಲಯದ ಕುಲಪತಿ ಪಂ.ಪ್ರದ್ಯುಮ್ನಾಚಾರ್ಯ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. 8 ರಂದು ಏಕಾದಶಿ ನಿಮಿತ್ತ ಪ್ರಹ್ಲಾದ ಮನ್ನಾರಿ ಮತ್ತು ಸಂಗಡಿಗರಿಂದ ಜಾಗರಣೋತ್ಸವ ಹಾಗೂ ಹರಿವಾಣ ಸೇವೆ ಜರುಗಲಿದೆ.
9 ರಂದು ಸಂಜೆ 6.45ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ 7.30ಕ್ಕೆ ವಿದುಷಿ ಇಚ್ಛಿತಾ ಮಡಕೇರಿ ಹಾಗೂ ತಂಡದವರಿಂದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದೆ. 10ರಂದು ಬೆಳಗ್ಗೆ 8ಕ್ಕೆ ಶ್ರೀ ನರಸಿಹ ದೇವರಿಗೆ ಹಣ್ಣಿನಿಂದ ಅಲಂಕಾರ, ಸಂಜೆ 5.30ಕ್ಕೆ ಪಂ.ಎಂ.ರವಿ ಆಚಾರ್ಯರರಿಂದ ಭಾಗವತ ಸಪ್ತಮ ಸ್ಕಂದ ಪ್ರವಚನ, ಸಂಜೆ 6.45ಕ್ಕೆ ನರಸಿಂಹ ಅವತಾರೋತ್ಸವ (ತೊಟ್ಟಿಲೋತ್ಸವ)ನಂತರ ನರಸಿಂಹ ದೇವರಿಗೆ ವಿಶೇಷ ಫಲಪಂಚಾಮೃತ, ಅಲಂಕಾರ, ರಜತ ಕವಚ ಮತ್ತು ನೂತನ ವಸ್ತ್ರ ಸಮರ್ಪಣೆ, ರಾತ್ರಿ 7.30ಕ್ಕೆ ಮಹಾ ನೈವೇದ್ಯ ಮತ್ತು ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ ಜರುಗುವುದು.
11ರಂದು ಬೆಳಗ್ಗೆ 11ಕ್ಕೆ ಮನ್ಯುಸೂಕ್ತ ಪುನಶ್ಚರಣ ಹೋಮ, ಮಧ್ಯಾಹ್ನ 12.30ಕ್ಕೆ ಹೋಮ ಪೂರ್ಣಾಹುತಿ, ಸಂಜೆ 5.30ಕ್ಕೆ ಮೈಸೂರಿನ ರಾಮಚಂದ್ರಾಚಾರ್ಯರಿಂದ ಹರಿದಾಸ ವೈಭವ ಕಾರ್ಯಕ್ರಮ ಜರುಗಲಿದೆ. 12ರಂದು ಬೆಳಗ್ಗೆ 8.30ಕ್ಕೆ ರಾಜಬೀದಿಯಲ್ಲಿ ನರಸಿಂಹ ದೇವರ ರಥೋತ್ಸವ ನಡೆಯಲಿದೆ. ಬೆಳಗ್ಗೆ 11ಕ್ಕೆ ಕನಕಾಭಿಷೇಕ, ಸ್ವಸ್ತಿವಾಚನ, ಮಧ್ಯಾಹ್ನ 12ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1ಕ್ಕೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.