ಕುರಿದೊಡ್ಡಿಯಾದ ಟ್ರಿಣ್ ಟ್ರಿಣ್ ಸ್ಟಾೃಂಡ್

15
Published on

ಮೈಸೂರು: ಟ್ರಿಣ್ ಟ್ರಿಣ್ ಬೈಸಿಕಲ್‌ಗಳು ತುಂಬಿರಬೇಕಾದ ಸ್ಟ್ಯಾಂಡ್ ಇದೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.

ಪರಿಸರ ಉಳಿವಿಗಾಗಿ ಸರ್ಕಾರ ಜನರ ತೆರಿಗೆ ಹಣದಿಂದ ಜಾರಿಗೆ ತಂದ ಯೋಜನೆ ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ಬೈಸಿಕಲ್‌ಗಳು ತುಂಬಿರಬೇಕಿದ್ದ ಸ್ಥಳದಲ್ಲಿ ಕುರಿ, ಮೇಕೆಗಳನ್ನ ತುಂಬಿದ್ದರೂ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ತರ ಯೋಜನೆ ಈ ಮೂಲಕ ಹಳ್ಳ ಹಿಡಿಯುವ ಸೂಚನೆ ತೋರಿಸುತ್ತಿದೆ.

ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು 2016 ರಲ್ಲಿ ಜಾರಿಗೆ ತಂದರು. ಪ್ರಾಯೋಗಿಕವಾಗಿ ಆರಂಭವಾದ ಯೋಜನೆಗೆ ಸಾರ್ವಜನಿಕರೂ ಸಹ ಉತ್ತಮವಾಗಿ ಸ್ಪಂದಿಸಿ ಬೈಸಿಕಲ್ ಬಳಕೆಯತ್ತ ಗಮನ ಹರಿಸಿದ್ದರು.

ಲಕ್ಷಾಂತರ ಮಂದಿ ಟ್ರಿಣ್ ಟ್ರಿಣ್ ಬೈಸಿಕಲ್ ವ್ಯವಸ್ಥೆಯನ್ನ ಸಮರ್ಪಕವಾಗಿಯೂ ಬಳಸಿಕೊಂಡಿದ್ದರು. ಆದರೆ ಇತ್ತೀಚೆಗೆ ಯೋಜನೆ ಹಳ್ಳ ಹಿಡಿಯುವ ಸೂಚನೆ ಕಾಣುತ್ತಿದೆ. ನಗರದ ಮಾತೃಮಂಡಳಿ ವೃತ್ತದ ಬಳಿ ಬೈಸಿಕಲ್‌ಗಳನ್ನು ನಿಲ್ಲಿಸಬೇಕಾದ ಸ್ಟಾೃಂಡ್ ಕುರಿ, ಮೇಕೆಗಳನ್ನ ತುಂಬಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಬೈಸಿಕಲ್ಗಳನ್ನ ಖರೀದಿಸುವತ್ತ ಪಾಲಿಕೆ ಗಮನ ಹರಿಸದ ಕಾರಣ ಸಂಖ್ಯೆ ಕ್ಷೀಣಿಸುತ್ತಿದೆ. ಸೈಕಲ್ಗಳ ಕೊರತೆಯಿಂದಾಗ ನಿಲ್ದಾಣಗಳು ಖಾಲಿಯಾಗುತ್ತಿವೆ. ಇದನ್ನೇ ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಲ್ದಾಣದಲ್ಲಿ ಕುರಿಗಳನ್ನ ತುಂಬಿಸಿಕೊಂಡು ದೊಡ್ಡಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net