ತ್ರಯಂಬಕೇಶ್ವರ ದೇವಸ್ಥಾನ ಜಾಗ ಉಳಿಸಿ

kavital dss
ಈರಣ್ಣ ಕೆಳಗೇರ
Published on

ಕವಿತಾಳ: ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದ ಜಾಗ ಉಳಿಸಿಕೊಳ್ಳಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಈರಣ್ಣ ಕೆಳಗೇರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತ್ರಯಂಬಕೇಶ್ವರ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದೆ. ದೇವಸ್ಥಾನದ ಜಾಗ ಕಬಳಿಸಲು ಕೆಲವರು ಪಿತೂರಿ ನಡೆಸಿದ್ದಾರೆ.

ಇನ್ನೂ ಕೆಲವರು ಆ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಚುನಾವಣೆ ಮತ್ತು ಆಮಿಷಕ್ಕಾಗಿ ವಾಸವಿರುವ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಲಾಗುವುದು ಎಂದು ಭರವಸೆ ನೀಡುತ್ತಿದ್ದಾರೆ. ಇದರಿಂದ ದೇವಸ್ಥಾನದ ಜಾಗ ಅನ್ಯರ ಪಾಲಾಗಲಿದೆ. ಆದ್ದರಿಂದ ದೇವಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಕೋರಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಬಿಎಡ್, ಪಪಂ ಸದಸ್ಯ ಮಲ್ಲಿಕಾರ್ಜುನಗೌಡ, ಅಲ್ಲಮಪ್ರಭು, ಓವಣ್ಣ ಕಡತಲ್, ಅಮರೇಶ ಕಟ್ಟಿಮನಿ, ಶರಣಬಸವ ಹಣಗಿ, ಸುರೇಶ ರಡ್ಡಿ, ಅರಳಪ್ಪ ತುಪ್ಪದೂರು, ಮಹಾದೇವ ಹಡಪದ, ಸಂತೋಷ , ಮೌನೇಶ ಬುಳ್ಳಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net