ತ್ರಯಂಬಕೇಶ್ವರ ದೇವಸ್ಥಾನ ಜಾಗ ನೀಡದಿರಿ

kavital memo
ಕವಿತಾಳದಲ್ಲಿ ಪಪಂ ಅಧಿಕಾರಿ ರಾಮ್‌ಗೆ ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಲ್ಲಮ ಪ್ರಭು, ತ್ರಯಂಬಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಬಿಎಡ್, ಮೌನೇಶ ಕೊಡ್ಲಿ, ಓವಣ್ಣ ಕಡತಲ್, ಮೌನೇಶ ನಾಯಕ, ರಿಯಾಜ್ ಆನ್ವರಿ, ಶಿವಪ್ಪ ಯಕ್ಲಾಸಪುರ ಇತರರಿದ್ದರು.
Published on

ಕವಿತಾಳ: ಪಟ್ಟಣದ ಐತಿಹಾಸಿಕ ತ್ರಯಂಬಕೇಶ್ವರ ದೇವಸ್ಥಾನದ ಜಾಗವನ್ನು ನಾಲ್ಕನೇ ವಾರ್ಡ್‌ನಲ್ಲಿ ವಾಸಿಸುವ ಕೊಳೆಗೇರಿ ನಿವಾಸಿಗಳಿಗೆ ನೀಡಬಾರದೆಂದು ಆಗ್ರಹಿಸಿ ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಪಪಂ ಅಧಿಕಾರಿಗೆ ಮನವಿ ಸಲ್ಲಿಸಿದರು.

ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಲ್ಲಮಪ್ರಭು ಮಾತನಾಡಿ, ಐತಿಹಾಸಿಕ ಪ್ರಸಿದ್ಧಿ ಪಡೆದ ದೇವಸ್ಥಾನದ ಜಾಗದಲ್ಲಿ ಕೆಲವರು ಮಳಿಗೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಕೆಲವರು ಉದ್ದಿಮೆಗಳಿದ್ದು, ಜಮೀನು ಮತ್ತು ವಸತಿ, ಮಳಿಗೆ ಹೊಂದಿದವರು ಇದ್ದಾರೆ. ಸ್ಲಂ ಜನರಿಗೆ ಜಾಗ ಮಂಜೂರು ಮಾಡುವುದರಿಂದ ದೇವಸ್ಥಾನಕ್ಕೆ ಜಾಗ ಕೊರತೆ ಆಗಲಿದೆ.

ಆದ್ದರಿಂದ ಸ್ಲಂ ನಿವಾಸಿಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಹಕ್ಕುಪತ್ರ ನೀಡಬಾರದು. ನಿರ್ಲಕ್ಷಿಸಿದರೆ ಹೋರಾಟ ಮಾಡಲಾಗುವುದು ಎಂದು ಸಿರವಾರ ತಹಸೀಲ್ದಾರ್‌ಗೆ ಬರೆದ ಮನವಿ ಪತ್ರವನ್ನು ಪ್ರದರ್ಶಿಸಿದರು. ತ್ರಯಂಬಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಬಿ.ಎಡ್, ಮೌನೇಶ ಕೊಡ್ಲಿ, ಓವಣ್ಣ ಕಡತಲ್, ಮೌನೇಶ ನಾಯಕ, ರಿಯಾಜ್ ಆನ್ವರಿ, ಶಿವಪ್ಪ ಯಕ್ಲಾಸಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net