ತ್ರಿಕಾಲ ಲಿಂಗ ಪೂಜೆ ನಿಷ್ಠಾವಂತೆ

ಮಾನ್ವಿಯ ತಹಸಿಲ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಉಪತಹಸೀಲ್ದಾರ್ ವಿನಾಯಕರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ನಯೋಪ್ರಾ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ ಇತರರಿದ್ದರು.
ಮಾನ್ವಿಯ ತಹಸಿಲ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಉಪತಹಸೀಲ್ದಾರ್ ವಿನಾಯಕರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ನಯೋಪ್ರಾ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ ಇತರರಿದ್ದರು.
Published on

ಮಾನ್ವಿ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಉಪತಹಸೀಲ್ದಾರ್ ವಿನಾಯಕರಾವ್ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶನಿವಾರ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಶರಣೆ ಮಲ್ಲಮ್ಮ ಅವರು ತ್ರಿಕಾಲ ಲಿಂಗ ಪೂಜೆ ನಿಷ್ಠಾವಂತರಾಗಿದ್ದರು. ಅವರ ಕಾಯಕ ದಾಸೋಹ ಸೇವೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿದ ಮಹಾನ್ ಶಿವಶರಣೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ನಯೋಪ್ರಾ ಮಾಜಿ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಎಸ್.ಶರಣಪ್ಪಗೌಡ, ಪ್ರಮುಖರಾದ ಡಾ.ಶರಣಪ್ಪ ಬಲ್ಲಟಗಿ, ಅರುಣಚಂದಾ, ಹರಿಹರ ಪಾಟೀಲ್, ಗುರುಸಿದ್ದಪ್ಪ ಕಣ್ಣೂರು, ಶಿವಕುಮಾರ ಪಾಟೀಲ್, ಅಮರೇಗೌಡ ಹೊಸೂರು, ಆದೆಪ್ಪಗೌಡ ಹೊಸೂರು, ಶಂಕರಗೌಡ ಮೇಟಿ, ಸಿದ್ದಲಿಂಗಪ್ಪ ವಕೀಲರು, ದೇವರೆಡ್ಡಿ ಮುದ್ದಂಗುಡ್ಡಿ, ಶಿವರೆಡ್ಡಿ, ಪ್ರಭುಗೌಡ, ಅಮರೇಶ ಚಿಂಚಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net