

ಕಾಂಬೋಡಿಯಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಮೈಸೂರಿಗೆ ಆಗಮಿಸಿದ ನಗರದ ಎಸ್‌ಜಿಎಸ್ ಇಂಟರ್‌ನ್ಯಾಷನಲ್ ಯೋಗ ಫೌಂಡೇಷನ್ ಮತ್ತು ರಿಸರ್ಚ್ ಸೆಂಟರ್‌ನ ವಿದ್ಯಾರ್ಥಿಗಳನ್ನು ಜಾನಪದ ಕಲಾ ತಂಡಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಪ್ರಥಮ ಬಹುಮಾನ ಪಡೆದ ರಜತ್, ವೇದಿಕಾ, ಭಾರತಿ, ದ್ವಿತೀಯ ಬಹುಮಾನ ಪಡೆದ ಸ್ವಾರಿತ್ ಜೈನ್, ಹರ್ಷಿತಾ, ಪೂರ್ಣಿಮಾ ಹಾಗೂ ಯೋಗ ತರಬೇತುದಾರ ರವ್ಣೀಕರ್ ಅವರಿಗೆ ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು.
ಬಳಿಕ ಎಸ್‌ಜಿಎಸ್ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಹಾರಾಣಿ ಕಾಲೇಜಿನ ಉಪನ್ಯಾಸಕ ಸತೀಶ್ ಚೆಟ್ಟಿ, ವಕೀಲ ಆರ್.ಡಿ.ಕುಮಾರ್, ಉದ್ಯಮಿ ಮಹದೇವಪ್ರಸಾದ್ ಇದ್ದರು.