ಡಾ.ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿ

ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಡಾ.ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಚನ್ನಪ್ಪ, ಸಿದ್ದರಾಜು, ಪ್ರಮೀಳಾ, ಶ್ರೀನಿವಾಸ್, ಕೆ.ಟಿ.ಶಿವಕುಮಾರ್, ನಿಂಗಪ್ಪ, ಇಂತಿಯಾಜ್ ಉಲ್ಲಾ ಖಾನ್, ಶ್ರೀನಿವಾಸ ಶೆಟ್ಟಿ ಇದ್ದರು.
ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಡಾ.ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಚನ್ನಪ್ಪ, ಸಿದ್ದರಾಜು, ಪ್ರಮೀಳಾ, ಶ್ರೀನಿವಾಸ್, ಕೆ.ಟಿ.ಶಿವಕುಮಾರ್, ನಿಂಗಪ್ಪ, ಇಂತಿಯಾಜ್ ಉಲ್ಲಾ ಖಾನ್, ಶ್ರೀನಿವಾಸ ಶೆಟ್ಟಿ ಇದ್ದರು.
Published on

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಶಿಕ್ಷಕ ಚನ್ನಪ್ಪ ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ದೇಶ ಆರ್ಥಿಕವಾಗಿ ಮುಂದುವರಿಯಲು ಭದ್ರ ಬುನಾದಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕ ಕೆ.ಟಿ.ಶಿವಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರೈತರ ಸಾಲ ಮನ್ನ ಮಾಡುವ ಮೂಲಕ ನೆರವಾದವರು. ಕೋವಿಡ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ಸಹ ಆರ್ಥಿಕ ಸ್ಥಿತಿಯ ಬಗ್ಗೆ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದರು ಎಂದು ತಿಳಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಸದಸ್ಯೆ ಪ್ರಮೀಳಾ, ಪ್ರಗತಿಪರ ಸಂಘಟನೆ ಸಂಚಾಲಕ ಶ್ರೀನಿವಾಸ್, ಪ್ರಗತಿ ಪರ ಚಿಂತಕ ಕೆ.ಟಿ.ಶಿವಕುಮಾರ್, ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅತಗೂರು ನಿಂಗಪ್ಪ, ಉಪಾಧ್ಯಕ್ಷ ಇಂತಿಯಾಜ್ ಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಪದಾಧಿಕಾರಿಗಳಾದ ದಾಕ್ಷಾಯಿಣಿ, ವೆಂಕಟೇಶ್, ವೈರಮುಡಿ, ರಾಚಯ್ಯ, ಶೇಖರ್, ಮೋಹನ್, ಶಿಕ್ಷಕ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net