ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ

Tributes paid to those killed in terrorist attacks
Published on

ಶಿಗ್ಗಾಂವಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಪ್ರವಾಸಿಗರಿಗೆ ಪಟ್ಟಣದ ಅಂಬೇಡ್ಕರ್ ಆಡಳಿತ ಸಂಕೀರ್ಣದ ಎದುರು ಮಂಡಲ ಬಿಜೆಪಿ ವತಿಯಿಂದ ಗುರುವಾರ ಶ್ರದ್ಧಾಂಜಲಿ ಕೋರಿ ಕ್ಯಾಂಡಲ್ ಮಾರ್ಚ್ ಹಾಗೂ ಮೌನಾಚರಣೆ ನಡೆಸಲಾಯಿತು.

ಬಿಜೆಪಿ ಯುವ ಮುಖಂಡ ನರಹರಿ ಕಟ್ಟಿ ಮಾತನಾಡಿ, ಭಯೋತ್ಪಾದಕ ದಾಳಿ ಭಾರತದೆಲ್ಲೆಡೆ ಆಘಾತ ಉಂಟು ಮಾಡಿದೆ. ಈ ಕ್ರೂರ ಹಲ್ಲೆಯಲ್ಲಿ ನಿರಪರಾಧಿ ಪ್ರವಾಸಿಗರು ತಮ್ಮ ಜೀವ ತ್ಯಜಿಸಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಅತ್ಯಂತ ದುಃಖದಾಯಕವಾಗಿದೆ. ದುಷ್ಟಶಕ್ತಿಗಳ ನೀಚ ಕೃತ್ಯಗಳು ನಮ್ಮ ದೇಶದ ಸಂಯಮ, ಶಾಂತಿ ಮತ್ತು ಒಗ್ಗಟ್ಟಿಗೆ ಧಕ್ಕೆಯಾಗಲಾರದು. ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಗಾಯಗೊಂಡಿರುವವರು ಶೀಘ್ರ ಗುಣವಾಗಲು ಎಂದು ಆಶಿಸುತ್ತೇವೆ. ಅವರ ಕುಟುಂಬಗಳೊಂದಿಗೆ ನಾವು ಈ ಸಂಕಷ್ಟದ ಹೊತ್ತಿನಲ್ಲಿ ಕೈಜೋಡಿಸುತ್ತೇವೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಡಾ. ಮಲ್ಲೇಶಪ್ಪ ಹರಿಜನ, ಕರಿಯಪ್ಪ ಕಟ್ಟಿಮನಿ, ಮಂಜುನಾಥ ಬ್ಯಾಹಟ್ಟಿ, ನವೀನ ರಾಮಗೇರಿ, ದೇವು ಸೊರಟೂರ, ಚಂದ್ರು ವಾಲ್ಮೀಕಿ, ಅನಿಲ ಸಾತಣ್ಣನವರ, ಪ್ರತೀಕ ಕೊಳೆಕರ, ಕಾಶಿನಾಥ ಕಳ್ಳಿಮನಿ, ಮಂಜುನಾಥ ಮಿರ್ಜಿ, ಸಚಿನ್ ಮಡಿವಾಳರ, ಚೇತನ ಕಲಾಲ, ಪ್ರಶಾಂತ ಬಡ್ಡಿ, ಕಿರಣ ಬಡ್ಡಿ, ಗುರುರಾಜ ಹೊನ್ನಣ್ಣನವರ, ಸತೀಶ ಬಾಣದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net