ಎಸ್​ಎಸ್​ಕೆ ಪ್ರಮುಖರಿಂದ ಶ್ರದ್ಧಾಂಜಲಿ

New SSK
Published on

ಹುಬ್ಬಳ್ಳಿ : ಇಲ್ಲಿನ ದಾಜಿಬಾನಪೇಟದ ಎಸ್​ಎಸ್​ಕೆ ಬ್ಯಾಂಕಿನ ಸಭಾಂಗಣದಲ್ಲಿ ಶುಕ್ರವಾರದಂದು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬ್ಯಾಂಕಿನ ಚೇರ್ಮನ್ ವಿಠ್ಠಲ ಲದವಾ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಎಸ್​ಎಸ್​ಕೆ ಸಮಾಜದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಡಾ. ಶಶಿಕುಮಾರ ಮೆಹರವಾಡೆ, ಮಹಾರಾಷ್ಟ್ರದ ಮಾಜಿ ಶಾಸಕ ನರಸಿಂಗ ಮೆಂಗಜಿ, ಸಮಾಜದ ಮುಖಂಡರಾದ ನಾರಾಯಣ ಹಬೀಬ, ಉಪಾಧ್ಯಕ್ಷ ನಾರಾಯಣ ಜರತಾರಘರ, ನಿರ್ದೇಶಕರಾದ ಅರುಣ ಇರಕಲ್ಲ, ದೀಪಕ ಮಗಜಿಕೊಂಡಿ, ಸುನೀಲ ವಾಳ್ವೇಕರ, ನಾರಾಯಣ ಖೋಡೆ, ಪ್ರಕಾಶ ಬುರಬುರೆ, ಸರಳಾ ಭಾಂಡಗೆ, ಸೀಮಾ ಲದವಾ, ಕೋ-ಅಪ್ಟ್ ನಿರ್ದೇಶಕ ಕಾಶೀನಾಥಸಾ ವಾಳ್ವೇಕರ ಹಾಗೂ ಬ್ಯಾಂಕಿನ ಸಮಸ್ತ ಶೇರುದಾರರು ಉಪಸ್ಥಿತರಿದ್ದರು. ಬ್ಯಾಂಕಿನ ವತಿಯಿಂದ ಹಮ್ಮಿಕೊಂಡಿದ್ದ ಮಹನಿಯರಿಗೆ ಸನ್ಮಾನ ಹಾಗೂ 2025ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಮುಂದೂಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net