

ಕಿನ್ನಿಗೋಳಿ: ಸವಾಜದ ಬಡವರ್ಗದ ಜನರ ಕಷ್ಟ ನೋವಿಗೆ ಸ್ಪಂದಿಸುವ ಮೂಲಕ, ಕಿನ್ನಿಗೋಳಿ ಇನ್ನರ್‌ವೀಲ್ ಉತ್ತಮ ಕೆಲಸ ವಾಡುತ್ತಿರುವುದು ಅಭಿನಂದನೀಯ ಎಂದು ಇನ್ನರ್‌ವೀಲ್ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವ ಹೇಳಿದರು.
ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಇತ್ತೀಚೆಗೆ ನಡೆದ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾತನಾಡಿದರು.
ಕ್ಲಬ್ ಸೇವಾ ಕಾರ್ಯಕ್ರಮದ ಅಂಗವಾಗಿ ಕೆಂಚನಕೆರೆ ಶಾಲಾ ಮಕ್ಕಳಿಗೆ ಟಿ ಶರ್ಟ್ ಮುಂತಾದ ವಸ್ತುಗಳನ್ನು ನೀಡಲಾಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮಹಿಳಾ ಪೌರ ಕಾರ್ಮಿಕರಾದ ಶಶಿಕಲಾ, ಶೋಭಾ, ಶಾಂತಾ, ಸುಶೀಲಾ, ಪೂರ್ಣಿವಾ, ಸೋಮಣಿ, ಲಕ್ಷ್ಮೀ, ಬೇಬಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ರಜನಿ ಭಟ್, ಜಿಲ್ಲಾ ಸಮಿತಿಯ ಚಿತ್ರಾ ರಾವ್, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಇನ್ನರ್‌ವೀಲ್ ಅಧ್ಯಕ್ಷೆ ಸವಿತಾ ಸಂತೋಷ್, ಕಾರ್ಯದರ್ಶಿ ವಿಮಲಾ ತ್ಯಾಗರಾಜ ಆಚಾರ್ಯ, ಮಮತಾ ಶೆಟ್ಟಿ, ದಿವ್ಯಾ, ರೇಖಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಡಾ.ಸುಧಾರಾಣಿ ಶೆಟ್ಟಿ ನಿರೂಪಿಸಿದರು.