ವೇಣೂರಲ್ಲಿ ಕೆ.ವಸಂತ ಬಂಗೇರಿಗೆ ನುಡಿ ನಮನ

nudinamana
ಕೆ.ವಸಂತ ಬಂಗೇರಿಗೆ ನುಡಿ ನಮನ ಕಾರ್ಯಕ್ರಮ ವೇಣೂರು ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು.
Published on

ಬೆಳ್ತಂಗಡಿ: ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ ವೇಣೂರು, ಯುವವಾಹಿನಿ ವೇಣೂರು ಘಟಕ ಹಾಗೂ ವೇಣೂರು ಬಂಗೇರ ಅಭಿಮಾನಿ ಬಳಗ ವತಿಯಿಂದ ಬೆಳ್ತಂಗಡಿಯ ಜನಪ್ರಿಯ ಮಾಜಿ ಶಾಸಕ, ನಮ್ಮೆಲ್ಲರ ಬಂಗಾರ ಕೆ.ವಸಂತ ಬಂಗೇರಿಗೆ ನುಡಿ ನಮನ ಕಾರ್ಯಕ್ರಮ ವೇಣೂರು ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು.

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ನುಡಿ ನಮನ ಸಲ್ಲಿಸಿದರು. ವೇಣೂರು ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆ ವಿಜ್ಞಾನ ವಿಭಾಗದ ಉಪನ್ಯಾಸಕ ಗುಣಪ್ರಸಾದ್ ಕಾರಂದೂರು, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ ಪೂಜಾರಿ, ನಿವೃತ್ತ ಮುಖ್ಯಶಿಕ್ಷಕ ಪ್ರಭಾಕರ ಹೆಗ್ಡೆ ಹಟ್ಟಾಜೆ ಗುತ್ತು, ಹಿರಿಯರಾದ ಮಹಮ್ಮದ್ ಸಾಹೇಬ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಪ್ರಸಾದ್ ಎಂ.ಕೆ., ಆರಾಧನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಭಟ್, ಗ್ರಾಮ ಪಂ.ಸದಸ್ಯರಾದ ಅನೂಪ್ ಜೆ.ಪಾಯಸ್, ಹರೀಶ್ ಪಿ.ಎಸ್., ಸುನೀಲ್ ಬಜಿರೆ, ಸುರೇಶ್ ಅಂಡಿಂಜೆ, ಪ್ರಮುಖರಾದ ವಿಶ್ವನಾಥ ದಡ್ಡಲ್ ಪಲ್ಕೆ, ವಿಕ್ಟರ್, ರಮೇಶ್ ಪಡ್ಡಾಯಿಮಜಲು, ದಯಾನಂದ ದೇವಾಡಿಗ, ಸತೀಶ್ ಉಜಿರ್ದಡ್ಡ, ಸತೀಶ್ ಕಜಿಪಟ್ಣ, ನವೀನ್ ಪಚೇರಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಶ್ರೀ ಗು.ನಾ.ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಿತೀಶ್ ಎಚ್.ಕೋಟ್ಯಾನ್ ಸ್ವಾಗತಿಸಿ, ವೇಣೂರು ಶ್ರೀ.ಗು.ನಾ.ಸ್ವಾ. ಸೇ.ಸಂಘದ ಕಾರ್ಯದರ್ಶಿ ರಾಕೇಶ್ ಕುಮಾರ್ ನಿರೂಪಿಸಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಸಂಘಟನಾ ಕಾರ್ಯದರ್ಶಿ ಅರುಣ್ ಕೋಟ್ಯಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net