

ಶಿರಸಿ: ಸಾಮಾಜಿಕ ನ್ಯಾಯ ಮತ್ತು ಅರಣ್ಯವಾಸಿಗಳ ಪರವಾಗಿ ನಿರಂತರ ಮೂರು ದಶಕಕ್ಕಿಂತ ಹೆಚ್ಚು ಸಂಘಟನೆ, ಹೋರಾಟ ಜರುಗಿಸಿರುವ ಹೋರಾಟಗಾರ ರವೀಂದ್ರ ನಾಯ್ಕ ಅವರನ್ನು ರಾಜ್ಯ ಮಟ್ಟದ ಮಾನವ ಬಂಧತ್ವ ವೇದಿಕೆಯು ಬೆಂಗಳೂರಿನಲ್ಲಿ ಗುರುವಾರ ಸನ್ಮಾನಿಸಿದರು.
ರಾಜ್ಯ ಮಟ್ಟದಲ್ಲಿ ವೈಶಿಷ್ಟ ಪೂರ್ಣವಾದ ಪರಿಸರ ಜಾಗೃತೆಯ ಅಂಗವಾಗಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಅಂಗವಾಗಿ ಗುರುವಾರ ದಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮಾನವ ಬಂಧತ್ವ ವೇದಿಕೆಯ ಪರವಾಗಿ ವೇದಿಕೆಯ ಸಂಚಾಲಕ ಹಾಗೂ ವಕೀಲ ಅನಂತ ನಾಯಕ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ಶಿರಸಿ-ಸಿದ್ದಾಪುರ ಕ್ಷೇತ್ರದ ಭೀಮಣ್ಣ ನಾಯ್ಕ, ಕಾರವಾರ ಕ್ಷೇತ್ರದ ಶಾಸಕ ಸತೀಶ ಶೈಲ್, ಜಿ.ಎಂ. ಶೆಟ್ಟಿ ಅಂಕೋಲಾ, ರಮಾನಂದ ನಾಯ್ಕ ಅಚಿವೆ, ಪಾಡುರಂಗ ನಾಯ್ಕ ಬೆಳಕೆ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ