ಕಲಿಸಿದ ಶಿಕ್ಷಕರಿಗೆ ಗುರುವಂದನೆ

web 4
Published on

ಧಾರವಾಡ: ನಗರದ ಗಂಡು ಮಕ್ಕಳ ಸರ್ಕಾರಿ ಟ್ರೈನಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು 45 ವರ್ಷಗಳ ಹಿಂದೆ ತಮಗೆ ಟಿ.ಸಿ.ಎಚ್. ತರಬೇತಿ ನೀಡಿದ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ಇಲ್ಲಿನ ಡಯಟ್ ಆವರಣದಲ್ಲಿ ಸೋಮವಾರ ನಡೆಯಿತು.
1977ರಿಂದ 1981ರ ಅವಧಿಯ ಪ್ರಾಚಾರ್ಯ ಶಿವಶಂಕರ ಹಿರೇಮಠ, ಟಿ.ಸಿ.ಎಚ್. ಪ್ರಶಿಕ್ಷಕರಾದ ಎಂ. ಎಸ್. ಪಾಟೀಲ, ಪಿ.ಎನ್. ಜೋಶಿ, ಆರ್.ಜಿ. ಹಿರೇಮಠ, ಬಸವರಾಜ ಕುರಬೇಟ, ಎ.ಡಿ. ಕಾಶಿನಕುಂಟಿ, ಬಿ.ಬಿ. ಕೊಟಬಾಗಿ, ಎಸ್.ವಿ. ಬೆಣ್ಣಿ, ಬಿ.ಟಿ. ಹಾಲಪ್ಪ ಅವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಗೌರವಿಸಿದರು.
ಇದೇವೇಲೆ ಚಂದ್ರಕಾಂತ ಬೆಲ್ಲದ ಹಾಗೂ ಡಯಟ್ ಪ್ರಾಚಾರ್ಯ ಜೆ.ಜಿ. ಸೈಯ್ಯದ್ ಅವರನ್ನೂ ವಿದ್ಯಾರ್ಥಿಗಳು ಸನ್ಮಾನಿಸಿದರು.
ಹೇ.ಜ. ಕಡೇಮನಿ, ಡಾ. ಗುರುಮೂರ್ತಿ ಯರಗಂಬಳಿಮಠ, ಎ.ಎ. ಕರಿಯಪ್ಪನವರ, ಎಸ್.ಡಿ. ಪವಾರ, ಜಿ.ಎನ್. ಹೊಸಮನಿ, ಅಶೋಕ ಚವ್ಹಾಣ, ಪಿ.ಎಂ. ಕಂಬಳಿ, ಜಿ.ಕೆ. ಜುಜಾರೆ, ಎಸ್.ವಿ. ಕುರುಡಗಿ, ಆರ್.ಸಿ. ಶೆಲ್ಲಿಕೇರಿ, ಟಿ.ಟಿ. ದಾಸರ, ಶಂಕರ ಮೂಗನೂರ, ಮಾಲತೇಶ ಕರ್ಜಗಿ, ಎ್.ಪಿ. ತೆಗ್ಗಿನಕೇರಿ, ವಸಂತ ಪತ್ತಾರ ಸೇರಿ 70 ಜನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net