ಸಾಧಕ ಮಹಿಳೆಯರಿಗೆ ಸನ್ಮಾನ

17 Dwd 3
Published on

ಧಾರವಾಡ: ನಗರದ ಕೆಲಗೇರಿಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ತತ್ವಮಸಿ ಸನ್ನಿಧಾನ ವತಿಯಿಂದ ೭೭ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಇತ್ತೀಚೆಗೆ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಪಿಎಚ್.ಡಿ ಪದವಿ ಪಡೆದ ಸಾವಿತ್ರಿ ಕೆ. ಹಿರೇಮಠ, ರಾಜ್ಯಮಟ್ಟದ ವಿದ್ಯಾರ್ಥಿ ವೇತನ ಅರ್ಹತಾ ಪರೀಕ್ಷೆ ತೇರ್ಗಡೆಯಾದ ಗಾಯತ್ರಿ ಹಳೆಮನಿ, ಬಿಎಸ್.ಸಿ ನರ್ಸಿಂಗ್ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ೨ ಬಂಗಾರದ ಪದಕ ಪಡೆದ ವೀಣಾ ಶಿಗ್ಗಾವಿ ಹಾಗೂ ನೀಟ್‌ನಲ್ಲಿ ಉತ್ತಮ ರ‍್ಯಾಂಕ್ ಪಡೆದ ಪೂರ್ಣಿಕಾ ಕಟಬಿ ಅವರನ್ನು ಸನ್ಮಾನಿಸಲಾಯಿತು.
ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಹಾಗೂ ಕೆಲಗೇರಿಯ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net