ಕೆಂಕೆರೆ ಗ್ರಾಮದ ಶ್ರೀಧರನಿಗೆ ಸನ್ಮಾನ

IMG-20250502-WA0536
Published on

ಅರಸೀಕೆರೆ ಗ್ರಾಮಾಂತರ: ಕಸಬಾ ಹೋಬಳಿ ರಂಗಾಪುರ ಕಾವಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿ ಶ್ರೀಧರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.

ಈತ ಗಂಡಸಿ ಹೋಬಳಿ ಕೆಂಕೆರೆ ಗ್ರಾಮದ ಕೂಲಿ ಕಾರ್ಮಿಕ ಶಂಕರಲಿಂಗಪ್ಪ ಹಾಗೂ ಜಯಮ್ಮ ದಂಪತಿ ಪುತ್ರ. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ, ಉಪಾಧ್ಯಕ್ಷ ಪುನೀತ್, ನಿರ್ದೇಶಕ ಷಣ್ಮುಖಪ್ಪ ಅವರು ಪ್ರತಿಭಾವಂತ ವಿದ್ಯಾರ್ಥಿಯನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net