

ಮೈಸೂರು: ವಿವಿಧ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಪೂರ್ಣಪ್ರಜ್ಞಾ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ನಾಗರಿಕ ವೇದಿಕೆಯಿಂದ ಸನ್ಮಾನಿಸಲಾಯಿತು.
6ನೇ ಓಪನ ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶಾಲೆಯ 2ನೇ ತರಗತಿ ವಿದ್ಯಾರ್ಥಿ ವಿ.ಶೆರ್ವಿನ್ ಹಾಗೂ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ 7ನೇ ತರಗತಿಯ ಜಿ.ಚಿರಾಗ್, ವರುಣ್ ರಾಜ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಗೌರವಾಧ್ಯಕ್ಷ ಬಿ.ಪಿ.ಪುಟ್ಟಸ್ವಾಮಿ, ಅಧ್ಯಕ್ಷ ರಂಗಯ್ಯ, ಉಪಾಧ್ಯಕ್ಷ ಎಚ್.ಅರವಿಂದ್, ಕಾರ್ಯದರ್ಶಿ ಕುಳ್ಳೇಗೌಡ, ಶಾಲಾ ಸಮಿತಿ ಅಧ್ಯಕ್ಷ ಜೆ.ಲೋಕೇಶ್, ಸದಸ್ಯರಾದ ಎಸ್.ಕೃಷ್ಣ, ಶೈಲೇಂದ್ರ, ರಮೇಶ್, ಶಿವಣ್ಣ, ರೇವಣ್ಣ ರಾಜ್, ರಮೇಶ್, ಶ್ರೀಕಾಂತ್, ಅಪ್ಪಾಜಿ ಗೌಡ ಇತರರಿದ್ದರು.