ತಿರಂಗಾ ಯಾತ್ರೆ ಮೂಲಕ ಸೈನಿಕರಿಗೆ ಗೌರವ

18 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸೇನೆ ಆಪರೇಷನ್​ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಹು-ಧಾ ಏರ್ಫೋರ್ಸ್​ ಅಸೋಸಿಯೇಷನ್​, ಸಶಸ್ತ್ರ ಪಡೆಗಳ ಒಕ್ಕೂಟ ವತಿಯಿಂದ ನಗರದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.

ಇಲ್ಲಿನ ಕಡಪಾ ಮೈದಾನದಿಂದ ಆರಂಭವಾದ ಯಾತ್ರೆ ಕೋರ್ಟ್​ ವೃತ್ತ, ಮುಖ್ಯ ಅಂಚೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಕಾರ್ಗಿಲ್ ಸ್ತೂಪದ ಬಳಿ ಸಂಪನ್ನಗೊಂಡಿತು.

ಮಾಜಿ ಸೈನಿಕರು, ವಿದ್ಯಾರ್ಥಿಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು "ಭಾರತ್​ ಮಾತಾ ಕೀ ಜೈ', ಜೈ ಜವಾನ್​ ಜೈ ಕಿಸಾನ್​', ಭಾರತೀಯ ಸೈನಿಕರಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಕಾಗಿರ್ಲ್​ ಸ್ತೂಪಕ್ಕೆ ಗೌರವ ನಮನ ಸಲ್ಲಿಸಿದ ಬಳಿಕ ನಿವೃತ್ತ ಸೈನಿಕ ಸಿ.ಎಸ್​.ಹವಾಲ್ದಾರ್​ ಮಾತನಾಡಿ, ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಅಮಾಯಕರ ಹತ್ಯೆಯಾಗಿದೆ. ಇದಕ್ಕೆ ಪ್ರತಿಕಾರವಾಗಿ ಭಾರತದ ಸೇನೆ ಆಪರೇಷನ್​ ಸಿಂಧೂರ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಜನರು ಬಯಸಿದ್ದನ್ನು ನಾವು ಮಾಡಿ ತೋರಿಸಿದೆವು. ಸೈನಿಕರ ಹಿಂದೆ ಇಡೀ ರಾಷ್ಟ್ರ ನಿಂತಿತ್ತು. ಆಪರೇಷನ್​ ಸಿಂಧೂರ ಇನ್ನೂ ಮುಗಿದಿಲ್ಲ ಎಂದರು.

ಚಂದ್ರಶೇಖರ ಅಮಿನಗಡ, ಅರವಿಂದ ಶಿಗ್ಗಾಂವಿ, ದಿಲೀಪ್​ ಜೋಗಿ, ಸುಭಾಷ ಸುಂಕದ, ಭೀಮಪ್ಪ ಜಾಧವ್​, ಸುಭಾಷ ಕೇದಾರ, ಎಂ.ಎಸ್​.ಪೂಜಾರ, ರಾಜೇಂದ್ರ ಕಪಲಿ, ಬಿ.ವೈ. ತಳವಾರ, ವೆಂಕಟೇಶ ಸಿಕಂದರ್​, ಉಮೇಶ ಅಕ್ಕಿಹಾಳ, ಶಾರದಾ ಜೋಶಿ, ಸುನಿತಾ ಕೌಜಲಗಿ, ರಾಜೇಶ್ವರ ಸುಂಕದ, ಶೋಭಾ ಕೇದಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net