ಸಿರಿಬಾಗಿಲು ಪ್ರತಿಷ್ಠಾನಕ್ಕೆ ಮಠಾಧೀಶರಿಂದ ಗೌರವಾರ್ಪಣೆ

ksd
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದಂಗಳವರು ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನ ಪದಾಧಿಕಾರಿಗಳನ್ನು ಶ್ರೀಮಠದಲ್ಲಿ ಹರಸಿದರು. ಚಾತುರ್ಮಾಸ್ಯ ಆಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಯಕ್ಷಗಾನ ತಾಳಮದ್ದಳೆ ಸಂದರ್ಭ ಸಿರಿಬಾಗಿಲು ಪ್ರತಿಷ್ಠಾನವನ್ನು ಗೌರವಿಸಲಾಯಿತು. ಗಡಿನಾಡು ಕಾಸರಗೋಡಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವುದರ ಜತೆಗೆ ಯಕ್ಷಗಾನದ ಅಧ್ಯಯನ, ಸಮಾಜಮುಖಿ ಚಟುವಟಿಕೆಗಳ ಮೂಲಕ ಸಿರಿಬಾಗಿಲು ಪ್ರತಿಷ್ಠಾನ ನಡೆಸುತ್ತಿರುವ ಸೇವೆ ಶ್ಲಾಘನೀಯವಾದುದು. ಮುಂದಿನ ದಿನಗಳಲ್ಲಿ ಪ್ರತಿಷ್ಠಾನಕ್ಕೆ ಭೇಟಿ ನೀಡುವುದಾಗಿ ಶ್ರೀ ವಿದ್ಯಾಪ್ರಸನ್ನ ಶ್ರೀಪಾದಂಗಳವರು ತಿಳಿಸಿದರು.

ನಿವೃತ್ತ ಮುಖ್ಯಶಿಕ್ಷಕ ಕೃಷ್ಣ ಶರ್ಮಾ ನಿರೂಪಿಸಿದರು. ಜಯರಾಮ ದೇವಸ್ಯ ಪ್ರತಿಷ್ಠಾನದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಿರಿಬಾಗಿಲು ಪ್ರತಿಷ್ಠಾನ ಪ್ರಕಾಶಿಸಿದ ಕೃತಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. ವಿಜಯ ಭಟ್ ಪಂಜ ಸಹಕರಿಸಿದರು. ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಮಯ್ಯ, ವೆಂಕಟ್ರಾಜ್ ಕುಂಟಿಕ್ಕಾನ, ಚೆಂಡೆ ಮದ್ದಲೆಯಲ್ಲಿ ಬಾಲಸುಬ್ರಹ್ಮಣ್ಯ ದೇವಸ್ಯ, ಲಕ್ಷ್ಮೀಶ ಪಂಜ, ಅರ್ಥಧಾರಿಗಳಾಗಿ ಶ್ರೀಸಕೃಷ್ಣ ಶರ್ಮ, ಕಂಬಲಿಕೆರೆ ಗಣೇಶ್ ಶರ್ಮ, ಜಯರಾಮ ಭಟ್ ದೇವಸ್ಯ, ಗುಂಡ್ಯಡ್ಕ ಈಶ್ವರ ಭಟ್ ಮೊದಲಾದವರು ಸಹಕರಿಸಿದರು. ಜಯರಾಮ ಭಟ್ ದೇವಸ್ಯ ಕಾರ್ಯಕ್ರಮ ಸಂಯೋಜಿಸಿದರು. ನಿವೃತ್ತ ಮುಖ್ಯಶಿಕ್ಷಕ ಶ್ರೀಕೃಷ್ಣ ಶರ್ಮ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net