

ಕೊಳ್ಳೇಗಾಲ: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠ ಪಟ್ಟದ ಹಿರಿಯ ಶ್ರೀ ಗುರುಸ್ವಾಮೀಜಿ ಅವರು ಲಿಂಗೈಕರಾದ ಹಿನ್ನೆಲೆ ಮಂಗಳವಾರ ಮಾನಸ ಶಿಕ್ಷಣ ಸಂಸ್ಥೆಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಪಟ್ಟಣದ ಮಾನಸ ಕಾಲೇಜು ಆವರಣದಲ್ಲಿ ಮಂಗಳವಾರ ಶ್ರೀ ಗುರುಸ್ವಾಮೀಜಿ ಅವರ ಭಾವಚಿತ್ರವನ್ನು ಇಟ್ಟು ಪುಷ್ಪನಮನ ಅರ್ಪಿಸಿ, ಕೆಲಕಾಲ ಮೌನಾಚರಣೆ ಮಾಡಿದರು.
ಮಾನಸ ಕಾಲೇಜು ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಮಾತನಾಡಿ, ಮಹದೇಶ್ವರ ಬೆಟ್ಟದ ಸಾಲೂರು ಬ್ರಹನ್ಮಠದ ಶ್ರೀಗಳು ಅಗಲಿಕೆ ನಮ್ಮಲ್ಲೆರಿಗೂ ತುಂಬಲಾರದ ನಷ್ಟವಾಗಿದೆ. ಅವರು ಮಾನಸ ಶಿಕ್ಷಣ ಸಂಸ್ಥೆ ಮೇಲೆ ಇಟ್ಟಿದ್ದ ಪ್ರೀತಿ, ವಿಶ್ವಾಸ, ಹಾರೈಕೆ ನಮ್ಮನ್ನು ಸದಾ ಕಾಲ ಕಾಪಾಡುತ್ತದೆ. ಶ್ರೀಗಳು ಮಾಡಿರುವ ಅಭಿವೃದ್ಧಿ ಕೆಲಸಗಳು, ಸಮಾಜಮುಖಿ ಕೆಲಸ ಅವರನ್ನು ಸದಾ ಜೀವಂತವಾಗಿರಿಸುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಿವರಾಜಪ್ಪ, ಮಾನಸ ಕಾಲೇಜು ವಿಶೇಷ ಅಧಿಕಾರಿ ಡಾ.ಆರ್. ನಾಗಭೂಷಣ್, ಪ್ರಾಂಶುಪಾಲ ಕೃಷ್ಣೇಗೌಡ, ಧನಂಜಯ, ಚನ್ನಶೆಟ್ಟಿ, ಡಾ.ಈ. ಜಗದೀಶ್, ಮುಖಂಡರಾದ ನಟರಾಜು ಮಾಳಿಗೆ, ಬೋಧಕ, ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಇದ್ದರು.