ಶಿಕ್ಷಣ ಕ್ರಾಂತಿ ಹರಿಕಾರ ಶರಣಬಸಪ್ಪ ಅಪ್ಪನವರಿಗೆ ಶ್ರದ್ಧಾಂಜಲಿ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ : ಕಲ್ಬುರ್ಗಿಯ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯ 8ನೇ ಪೀಠಾಧಿಪತಿಗಳಾಗಿದ್ದ ಡಾ. ಶರಣಬಸಪ್ಪ ಅಪ್ಪ ಅಗಲಿಕೆ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಉತ್ತರ ಕರ್ನಾಟಕದ ಭಾಗದಲ್ಲಿನ ಶೈಕ್ಷಣಿಕ ಕ್ರಾಂತಿ ಮಾಡಿದ ಡಾ. ಶರಣಬಸಪ್ಪ ಅಪ್ಪನವರು ಬಾಲ್ಯದಲ್ಲಿ ಪಾಠಕ್ಕಿಂತ ಆಟದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ತಂದೆ ದೊಡ್ಡಪ್ಪ ಅಪ್ಪನವರನ್ನು ಮಾದರಿಯಾಗಿಸಿಕೊಂಡಿದ್ದ ಅವರು, ಅಧ್ಯಾತ್ಮ, ಧರ್ಮ ಚಿಂತನೆ, ತತ್ವಜ್ಞಾನದತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದು ಗಣ್ಯರು ಕಂಬನಿ ಮಿಡಿದರು.ಡಾ. ಶರಣಬಸಪ್ಪ ಅಪ್ಪನವರು 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭಿಸುವ ಮೂಲಕ ಅಪಾರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿದ್ದರು. ಅಲ್ಲದೆ, ಮಹಿಳೆಯರಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್​ ಕಾಲೇಜು ಪ್ರಾರಂಭಿಸಿದ್ದರು ಎಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು

.

ಇಖಲಾಸ್​ ಸುನ್ನೆವಲೆ, ನ್ಯಾಯವಾದಿ ಸಮದ ಸುತ್ತಾರ, ಬಿಲಾಲ್​ ಜಾನ್ವೇಕರ, ಅನ್ವರ ಜಂಬಗಿ, ಬುಡನ ಲಾಟಿ, ನಿಜಾಮೋದ್ದಿನ ಹಿರಿಯಾಳ ಮತ್ತಿತರರಿದ್ದರು.

ಕಲ್ಬುರ್ಗಿಯ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆ 8ನೇ ಪಿಠಾಧಿಪತಿ ಡಾ. ಶರಣಬಸಪ್ಪ ಅಪ್ಪನವರ ಅಗಲಿಕೆ ಹಿನ್ನೆಲೆಯಲ್ಲಿ ವಿಜಯಪುರದ ಗಾಂಧಿನ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಖಲಾಸ್​ ಸುನ್ನೆವಲೆ, ಸಮದ್​ ಸುತ್ತಾರ, ಬಿಲಾಲ್​ ಜಾನ್ವೇಕರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net