ಸಾರ್ಜೆಂಟ್ ಸುಹಿತ್ ಜಿ.ಎಸ್.ಗೆ ಸನ್ಮಾನ

Tribute to Sergeant Suhit G.S
Published on

ಮಡಿಕೇರಿ:

ಕೊಡಗು ವಿದ್ಯಾಲಯ ೯ನೇ ತರಗತಿ ವಿದ್ಯಾರ್ಥಿ ಗೋಲ್ಡನ್ ಸಾಜೆರ್ಂಟ್ ಸುಹಿತ್ ಜಿ.ಎಸ್. ಸೆ. ೧೯ರಿಂದ ೩೦ರ ವರೆಗೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ತಳ ಸೈನಿಕ ಶಿಬಿರದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿದ್ದಾನೆ.

ಈ ಶಿಬಿರದ ಆಯ್ಕೆಯ ಮೊದಲು ೩ ತಿಂಗಳ ತರಬೇತಿ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕರ್ನಾಟಕ ಮತ್ತು ಗೋವ ಡೈರೆಕ್ಟರೇಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆದ ಅಖಿಲ ಭಾರತ ತಳ ಸೈನಿಕ ಶಿಬಿರಕ್ಕೆ ಸುಹಿತ್ ಆಯ್ಕೆಯಾಗಿದ್ದ. ಕೊಡಗು ವಿದ್ಯಾಲಯದ ಎನ್. ಸಿ. ಸಿ. ಅಧಿಕಾರಿ ಮೇ. ದಾಮೋದರ್ ಅವರ ತರಬೇತಿಯಿಂದ ಈ ಸಾಧನೆಯನ್ನು ಮಾಡಿರುವುದಾಗಿ ೧೯ ನೇ ಕರ್ನಾಟಕ ಎನ್ ಸಿಸಿ ಬೆಟಾಲಿಯನ್ ಕೆಡೆಟ್ ಸುಹಿತ್ ಹೇಳಿದ್ದಾನೆ.

ಎನ್‌ಸಿಸಿಯಲ್ಲಿ ಸಾಧನೆ ಮಾಡಿದ ಹೆಮ್ಮೆಯ ವಿದ್ಯಾರ್ಥಿಯನ್ನು ಕೊಡಗು ವಿದ್ಯಾಲಯದ ವತಿಯಿಂದ ಬ್ಯಾಂಡ್ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪೋಷಕರಾದ ಸುರೇಂದ್ರ, ಗೀತಾ ಸುರೇಂದ್ರರ ಸಮ್ಮುಖದಲ್ಲಿ ಶಾಲಾ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತ ವ್ಯವಸ್ಥಾಪಕ ರವಿ ಪಿ. ಹಾಗೂ ಮೇಜರ್ ದಾಮೋದರ್ ವಿದ್ಯಾರ್ಥಿ ಸುಹಿತ್‌ಯನ್ನು ಸನ್ಮಾನಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net