ಬುದ್ಧಿಮಾಂದ್ಯ ಮಕ್ಕಳ ಶಾಲೆ ಶಿಕ್ಷಕರಿಗೆ ಸನ್ಮಾನ

05 LXR-3
Published on

ಲಕ್ಷ್ಮೇಶ್ವರ: ಗಂಧದಗುಡಿ ಬಳಗ ಹಾಗೂ ಕರ್ನಾಟಕ ಪ್ರಜಾಪರ ವೇದಿಕೆಯ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪಟ್ಟಣದ ಅರಳು ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಗಂಧದ ಗುಡಿ ಬಳಗದ ಜಿಲ್ಲಾಧ್ಯಕ್ಷ ಹಸನ್ ತಹಶೀಲ್ದಾರ ಮಾತನಾಡಿ, ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಹಾಗೂ ದೇಶವನ್ನು ಕಟ್ಟಲು ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ ಎಂದರು.

ಮುಖ್ಯಶಿಕ್ಷಕ ನೀಲಮ್ಮ ದಾಸಪ್ಪನವರ, ಲಲಿತಾ ದಾಸಪ್ಪನವರ, ನೇತ್ರಾ ತಳಗೇರಿ, ಮಂಗಳ, ಗೌರಮ್ಮ, ಅಕ್ಕಮ್ಮ, ಕೊರದಾಳ, ರೂಪ ಸಂಟಿ, ಗೌರವ್ವ ಹಿರೇಮಠ, ಮಲ್ಲಪ್ಪ ಹೊಂಗಲ, ಶರೀಫ ಗುಡಿಮನಿ, ಸುನೀಲಗೌಡ ಪಾಟೀಲ, ಕಿರಣ ನಡುವಿನಕೇರಿ, ಕಳಕಪ್ಪ ಬಿಸನಳ್ಳಿ, ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net