ಸಾಧಕ ವಿದ್ಯಾಥಿರ್ಗಳಿಗೆ ಸನ್ಮಾನ

14 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವೀತಿಯ ಪಿಯು ಪರೀೆಯಲ್ಲಿ ಉತ್ತಮ ಅಂಕ ಪಡೆದ ಇಲ್ಲಿನ ಭಾರತಿನಗರದ ಗುರುದೇವ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾಥಿರ್ಗಳ ಪ್ರತಿಭಾ ಪುರಸ್ಕಾರ ಸಮಾರಂಭ ಇತ್ತೀಚೆಗೆ ಜರುಗಿತು.
ಕಾಲೇಜಿನ ನಿರ್ದೇಶಕ ಅಖಿಲಕುಮಾರ ಹಲಗತ್ತಿ ಮಾತನಾಡಿ, ವಿದ್ಯಾಥಿರ್ಗಳ ಸಾಧನೆ ಶ್ಲಾನೀಯ. ಪಾಲಕರ ಹಾಗೂ ಶಿಕ್ಷಕರ ಬೆಂಬಲದಿಂದ ವಿದ್ಯಾಥಿರ್ಗಳು ಉತ್ತಮ ಸಾಧನೆ ಮಾಡಿದ್ದಾರೆ. ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ವಿದ್ಯಾಥಿರ್ಗಳಿಗೆ ಶುಭ ಹಾರೈಸಿದರು.
ಪ್ರಾಚಾರ್ಯ ಮದನ ಇ.ಜಿ. ಮಾತನಾಡಿ, ಪರಿಶ್ರಮವೇ ವಿದ್ಯಾಥಿರ್ಗಳ ಯಶಸ್ಸಿಗೆ ಕಾರಣ. ಇನ್ನೂ ಹೆಚ್ಚಿನ ಶ್ರಮದೊಂದಿಗೆ ಜೀವನದಲ್ಲಿ ಯಶಸ್ಸು ಗಳಿಸಿ ಎಂದ ಅವರು, ಗುರಿ ಮುಟ್ಟುವವರೆಗೂ ಪರಿಶ್ರಮ ನಿರಂತರವಾಗಿರಲಿ ಎಂದರು.
ಉಪಪ್ರಾಚಾರ್ಯ ಮಹಾಲಿಂಗ ಕಮತಗಿ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿ ಸಾಜೀದ್​ ಎಚ್​., ಉಪನ್ಯಾಸಕರು, ಸಿಬ್ಬಂದಿ, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net