ಧರ್ಮಗುರು ಅಬ್ರಹಾಂ ಪಟ್ಟೇರಿಗೆ ಸನ್ಮಾನ

New Project (11)
Published on

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರು ಫಾ.ಅಬ್ರಹಾಂ ಪಟ್ಟೇರಿ ತಮ್ಮ ಯಾಜಕಾಭಿಷೇಕದ ರಜತ ಸಂಭ್ರಮದ ಹೊಸ್ತಿಲಲ್ಲಿದ್ದು, ಅವರನ್ನು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಫಾ.ಶಾಜಿ ಮ್ಯಾಥ್ಯೂ ಮಾತನಾಡಿ, ಅಕ್ಷರ ಮತ್ತು ಆಹಾರ ದಾಸೋಹದ ಮೂಲಕ ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯ ವ್ಯಕ್ತಿತ್ವವನ್ನು ಫಾ.ಪಟ್ಟೇರಿ ಹೊಂದಿದ್ದಾರೆ. ಡಿ.28ರಂದು 25 ವರ್ಷಗಳ ಯಶಸ್ವಿ ಯಾಜಕ ಸೇವೆಯನ್ನು ಪೂರ್ಣಗೊಳಿಸಲಿರುವ ಅವರು ಉಡುಪಿ ಜಿಲ್ಲೆ ಮುದೂರು, ಬೈಂದೂರು ತಾಲೂಕಿನ ಕಲ್ಮಕ್ಕಿ ಹಾಗೂ ಬೆಳ್ತಂಗಡಿ ಬೆದ್ರಬೆಟ್ಟು ಚರ್ಚುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ 14 ವರ್ಷಗಳಿಂದ ಧರ್ಮಪ್ರಾಂತ್ಯದ ಹಣಕಾಸು ಅಧಿಕಾರಿ ಸ್ಥಾನದಲ್ಲಿ ಸೇವೆ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಚರ್ಚ್ ಟ್ರಸ್ಟಿಗಳಾದ ಶಿಬು, ಜೋಬಿನ್, ಅಲೆಕ್ಸ್, ಅಲ್ಬಿನ್, ಲೆಕ್ಕಪರಿಶೋಧಕ ಸುರೇಶ್, ಕಾರ್ಯದರ್ಶಿ ಜೆಸ್ಸಿ ಕೆ.ಜೆ, ಭಗಿನಿ ಸಿ.ಲಿಸ್ಸಿ ಮ್ಯಾಥ್ಯೂ, ರೊಯ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net