ನಿವೃತ್ತ ಶಿಕ್ಷಕಿ ನಳಿನಾದೇವಿಗೆ ಸನ್ಮಾನ

sanmana
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ಉಪನ್ಯಾಸಕರಾಗಿ ನಿವೃತ್ತರಾದ ನಳಿನಾದೇವಿ ಎಂ.ಆರ್ ಅವರನ್ನು ಸನ್ಮಾನಿಸಲಾಯಿತು.
Published on

ಜನ್ನಾಡಿ: ಉಪನ್ಯಾಸಕರಾಗಿ ನಿವೃತ್ತರಾದ ನಳಿನಾದೇವಿ ಎಂ.ಆರ್ ಅವರಿಗೆ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ಉಡುಪಿ ಜಿಲ್ಲೆ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ ಸಹಾಯಕ ಮಹಾ ಪ್ರಬಂಧಕ ವಾದಿರಾಜ ಕೆ. ನಿವೃತ್ತರನ್ನು ಸನ್ಮಾನಿಸಿದರು. ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಕನ್ನಡ ಉಪನ್ಯಾಸಕ ಸಂಘ ಅಧ್ಯಕ್ಷ ಶ್ರೀಧರ ಶೆಟ್ಟಿ, ಗೌರವ ಸಲಹೆಗಾರ ವಿಶ್ವನಾಥ ಕರಬ, ಕಟೀಲು ನಿವೃತ್ತ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ವಾಸಂತಿ ಅಂಬಲಪಾಡಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕನ್ನಡ ಸಂಘ ಅಧ್ಯಕ್ಷ ಉದಯ ಶೆಟ್ಟಿ ಕಾಳಾವರ ಸ್ವಾಗತಿಸಿದರು. ಉಪನ್ಯಾಸಕ ಡಾ.ಸುಧಾಕರ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಉದಯ ಎಂ. ವಂದಿಸಿದರು. ಉಪನ್ಯಾಸಕ ನುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net