ನಿವೃತ್ತ ಶಿಕ್ಷಕ ಅನಂತರಾಮುಗೆ ಸನ್ಮಾನ

12blrp3
ಬೇಲೂರು ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಅನಂತರಾಮು ಅವರನ್ನು ಲಯನ್ಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು. ವೈ.ಬಿ.ಸುರೇಶಗೌಡ, ರಮೇಶ್‌ಕುಮಾರ್, ಮುರುಳಿಧರ್ ಇತರರಿದ್ದರು.
Published on

ಬೇಲೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತಿ ನಂತರವೂ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅನಂತರಾಮು ಅವರನ್ನು ಲಯನ್ಸ್ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೇಲೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ವೈ.ಬಿ. ಸುರೇಶಗೌಡ ಮಾತನಾಡಿ, ಸಂಸ್ಥೆಯು ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಇದರ ಜತೆಯಲ್ಲೇ ಶಿಕ್ಷಕರನ್ನು ಗೌರವಿಸುತ್ತ ಬಂದಿದೆ. ಶಿಕ್ಷಣ ದಿನಾಚರಣೆ ಅಂಗವಾಗಿ ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರೂ ಸೇವೆ ಮುಂದುವರಿಸಿದ ಅನಂತರಾಮು ಅವರನ್ನು ಸಂಸ್ಥೆಯಿಂದ ಗೌರವಿಸಲಾಗಿದೆ ಎಂದರು.

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್ ಮಾತನಾಡಿ, ಅನಂತರಾಮು ಅವರು ತೀರ್ಥಹಳ್ಳಿ ಪ್ರೌಢಶಾಲೆ ಹಾಗೂ ಬೇಲೂರಿನ ಸಂಸ್ಕೃತ ವೇದ ಪಾಠಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ನಿವೃತ್ತರಾದರೂ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸಂಸ್ಥೆಯಿಂದ ದೇವ ಭಾಷೆ ನೈಪುಣ್ಯ ರತ್ನ ಎಂದು ಬಿರುದು ನೀಡಿ ಗೌರವಿಸಲಾಗಿದೆ ಎಂದರು.

ಪೂರ್ಣಪ್ರಜ್ಞಾ ಶಾಲೆ ಕಾರ್ಯದರ್ಶಿ ಮುರುಳಿಧರ್, ಪ್ರಾಂಶುಪಾಲ ಪ್ರಶಾಂತ್, ಮುಖ್ಯಶಿಕ್ಷಕಿ ಸನೀತಾ, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಪ್ರಭಾಕರ್, ಡಾ.ಚಂದ್ರಮೌಳಿ, ಪೂವಯ್ಯ, ಸದಸ್ಯರಾದ ಸ್ವರ್ಣ, ಸಂತೋಷ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net