ನಿವೃತ್ತ ಯೋಧ ಮೈಲಾರಪ್ಪಗೆ ಸನ್ಮಾನ

3 lxr 3- soldure sanmana
Published on

 ಲಕ್ಷ್ಮೇಶ್ವರ: ಸಿಆರ್​ಪಿಎಫ್​ನಲ್ಲಿ 26 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿಗೊಂಡು ತವರೂರಿಗೆ ಮರಳಿದ ಯೋಧ ಮೈಲಾರಪ್ಪ ಮ್ಯಾಟಣ್ಣವರ ಅವರನ್ನು, ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪಟ್ಟಣದ ಸಾರ್ವಜನಿಕರು ಗುರುವಾರ ಮೆರವಣಿಗೆ ಮೂಲಕ ಸ್ವಾಗತಿಸಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಮುಖದಲ್ಲೂ ಸಂಭ್ರಮ, ಹೆಮ್ಮೆ ಮನೆ ಮಾಡಿತ್ತು.

ನಂತರ ಪಟ್ಟಣದ ಯೋಧನ ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹೆಸ್ಕಾಂನ ಎಇಇ ಆಂಜಿನಪ್ಪ, ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು, ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಮಡಿವಾಳರ, ಗ್ರಾ.ಪಂ. ಮಾಜಿ ಸದಸ್ಯ ಫಕೀರೇಶ ಮ್ಯಾಟಣ್ಣನವರ ಮಾತನಾಡಿದರು.

ಹನುಮಂತ ಮ್ಯಾಟಣ್ಣನವರ, ಮಾರುತಿ ಹರಿಜನ, ಮಂಜುನಾಥ್ ಸೀತಮ್ಮನವರ, ತಿಪ್ಪಣ್ಣ ಸಂಶಿ, ಬಸವರಾಜ್ ಸೂರಣಗಿ, ರವಿ ಕರೆಣ್ಣನವರ, ಸಂಜೀವಣ್ಣನವರ ನಿವೃತ್ತ ಯೋಧರ ಸಂಘ, ಹಾಗೂ ಪೈಲ್ವಾನರ ಸಂಘದವರು ಉಪಸ್ಥಿತರಿದ್ದರು. ಶ್ರೀಕಾಂತ್ ಬಾಲೆಹೊಸೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net