

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಮುದ್ರಾಡಿಯ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ, ಶಾಲೆಯಿಂದ ನಿವೃತ್ತರಾದ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ದಿವಾಕರ ಎನ್. ಶೆಟ್ಟಿ ಶುಭಹಾರೈಸಿದರು. ಮುದ್ರಾಡಿಯ ಅನುದಾನಿತ ಪ್ರೌಢಶಾಲೆ ಸ್ಥಾಪಕ ಅಧ್ಯಕ್ಷ ಕಷ್ಣ ಡಿ. ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಮುದ್ರಾಡಿ ಗ್ರಾಪಂ ಹಿರಿಯ ಸದಸ್ಯ ಗಣಪತಿ ಎಂ., ಪ್ರಮುಖರಾದ ಭರತ್, ಸುರೇಶ್ ಕುಲಾಲ್, ಮುದ್ರಾಡಿ ಮಂಜುನಾಥ ಪೂಜಾರಿ, ಸನತ್ ಕುವಾರ್, ಅಶೋಕ ಕುವಾರ್ ಶೆಟ್ಟಿ, ಶಶಿಕಲಾ ಡಿ.ಪೂಜಾರಿ, ಇಂದಿರಾ ಬಾಯರಿ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ಯಾಮಲಾ ಕೊಠಾರಿ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮಹೇಶ್ ನಾಯ್ಕ ಅಭಿನಂದನಾ ಪತ್ರ ವಾಚಿಸಿದರು. ಪಿ.ವಿ.ಆನಂದ ವಂದಿಸಿದರು. ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು. ರುಪತಿ ಹೆಬ್ಬಾರ್, ಮಹೇಶ್ ಕಾನ್ಗುಂಡಿ ಸಹಕರಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಹರ್ಷಿತ್, ವಿನೀತಾ, ಸುಗಂಧಿ, ರಂಜಿತ್ ಅವರಿಗೆ ಪತ್ರಕರ್ತೆ ಸಂಧ್ಯಾ ಪೈ ಕೊಡಮಾಡುವ ದತ್ತಿನಿಧಿ, ಮರಿಯಪ್ಪ ಕಲ್ಕೂರರ ಸ್ಮರಣಾರ್ಥ ಮುದ್ರಾಡಿಯ ಜಗದಂಬಾ ಆರ್. ಶೆಟ್ಟಿ ಅವರ ದತ್ತಿನಿಧಿ, ಹೆಬ್ರಿಯ ಕನ್ನಡ ಸೇನಾನಿ ಗಂಗಾಧರ ರಾವ್ ಮತ್ತು ವರಂಗದ ಕಮಲಾ ಪೂಜಾರಿ ಸ್ಮರಣಾರ್ಥ ಸುರೇಶ ಪೂಜಾರಿ ನೀಡುವ ಬಹುವಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.